ಪ್ರಿಯಕರನ ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ನಟಿ ನಿಳನಿ
ಭಾನುವಾರ, 23 ಸೆಪ್ಟಂಬರ್ 2018 (06:28 IST)
ಚೆನ್ನೈ : ಮಾಜಿ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಮನನೊಂದ ನಟಿ ನಿಳನಿ ಸೊಳ್ಳೆ ಬತ್ತಿ ತಿಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಲಸರವಕ್ಕಂನಲ್ಲಿ ನಡೆದಿದೆ.
ಕಳೆದ ಮೂರು ವರ್ಷಗಳಿಂದ ನಟಿ ನಿಳನಿ ಹಾಗೂ ಆಕೆಯ ಪ್ರಿಯಕರ ಗೌರಿ ಲಲಿತ್ ಕುಮಾರ್ ಲಿವಿಂಗ್ ಟು ಗೆದರ್ ನಲ್ಲಿದ್ದರು. ಇತ್ತೀಚೆಗೆ ಆತ ನಟಿ ನಿಳನಿ ಯನ್ನು ಮದುವೆಯಾಗುವಂತೆ ಒತ್ತೀಯಿಸುತ್ತಿದ್ದ ಕಾರಣ ನಟಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ.
ಇದರಿಂದ ಆತ ಗುರುವಾರ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದರು. ಈ ಘಟನೆಯಿಂದ ಮನನೊಂದ ನಟಿ ನಿಳನಿ ಶುಕ್ರವಾರ ಬೆಳಗ್ಗೆ ಸೊಳ್ಳೆ ಬತ್ತಿ ತಿಂದು ಆತ್ಮಹತ್ಯೆಗೆ ಯತ್ನಿಸಿದ್ದರು. ನೆರೆಹೊರೆಯವರು ಕೂಡಲೇ ನಳಿನಿ ಅವರನ್ನು ರೊಯಪೆಟ್ಟಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.