ತರಕಾರಿ ಬೆಲೆ ಹೆಚ್ಚಳಕ್ಕೆ ಮಿಯಾ ಮುಸ್ಲಿಮರೇ ಕಾರಣ : ಹಿಮಂತ ಬಿಸ್ವಾ ಶರ್ಮಾ

ಭಾನುವಾರ, 16 ಜುಲೈ 2023 (06:46 IST)
ಗುವಾಹಟಿ : ಅಸ್ಸಾಂನಲ್ಲಿ ತರಕಾರಿ ಬೆಲೆ ಹೆಚ್ಚಳಕ್ಕೆ ಬಾಂಗ್ಲಾ ಮೂಲದ ಮಿಯಾ ಮುಸ್ಲಿಮರೇ ಕಾರಣ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಆರೋಪಿಸಿದ್ದಾರೆ.

ಗುವಾಹಟಿಯಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಲು ಕಾರಣವೇನು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಈಗ ತರಕಾರಿ ಬೆಲೆ ಹೆಚ್ಚಿಸಿದವರು ಯಾರು? ಮಿಯಾ ವ್ಯಾಪಾರಿಗಳೇ ಹೆಚ್ಚಿನ ದರಕ್ಕೆ ತರಕಾರಿ ಮಾರುತ್ತಿದ್ದಾರೆ ಎಂದು ಉತ್ತರಿಸಿದ್ದಾರೆ.

ಗುವಾಹಟಿಯಲ್ಲಿ ತರಕಾರಿ ವ್ಯಾಪಾರಿಗಳೆಲ್ಲಾ ಮಿಯಾ ಮುಸ್ಲಿಮರೇ ಆಗಿದ್ದಾರೆ. ಇಂದು ಹೆಚ್ಚಿನ ತರಕಾರಿ ಮಾರಾಟಗಾರರು, ರಿಕ್ಷಾ ಚಾಲಕರು, ಬಸ್ ಚಾಲಕರು, ಓಲಾ-ಉಬರ್ ಚಾಲಕರು ಮಿಯಾ ಮುಸ್ಲಿಮರು. ಸ್ಥಳೀಯ ಅಸ್ಸಾಮಿ ಯುವಕರು ಅವರೊಂದಿಗೆ ಸ್ಪರ್ಧಿಸಿ ಈ ಉದ್ಯೋಗಗಳನ್ನು ಕಸಿದುಕೊಳ್ಳಬೇಕು. ಅವರಿಂದಲೇ ತರಕಾರಿ ಬೆಲೆ ಹೆಚ್ಚಳವಾಗಿದೆ ಅಂತಾ ಆಪಾದಿಸಿದ್ದಾರೆ.

ಮಿಯಾ ವ್ಯಾಪಾರಿಗಳು ತರಕಾರಿಗಳಿಗೆ ಹೆಚ್ಚಿನ ಬೆಲೆಯನ್ನು ವಿಧಿಸುತ್ತಿದ್ದಾರೆ. ಆದರೆ ಹಳ್ಳಿಗಳಲ್ಲಿ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಒಂದು ವೇಳೆ ಅಸ್ಸಾಂ ಜನ ಇಂದು ತರಕಾರಿ ಮಾರಾಟ ಮಾಡುತ್ತಿದ್ದರೆ ಎಂದಿಗೂ ಹೆಚ್ಚು ಬೆಲೆ ವಿಧಿಸುತ್ತಿರಲಿಲ್ಲ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ