ರಾಹುಲ್ ಗಾಂಧಿ ಎಂದರೆ ನಿಫಾ ವೈರಸ್ ಇದ್ದಂತೆ ಎಂದು ವಿವಾದ ಸೃಷ್ಟಿಸಿದ ಸಚಿವ!
ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುವ ಅನಿಲ್ ‘ರಾಹುಲ್ ಗಾಂಧಿ ಎಂದರೆ ನಿಫಾ ವೈರಸ್ ಇದ್ದಂತೆ. ಅವರ ಜತೆ ಸಂಬಂಧ ಬೆಳೆಸುವ ಯಾವುದೇ ಪಕ್ಷವೂ ಹೆಚ್ಚು ಕಾಲ ಉಳಿಯುವುದಿಲ್ಲ’ ಎಂದು ವಿವಾದಕ್ಕೆ ಕಾರಣರಾಗಿದ್ದಾರೆ.
ಇದಕ್ಕೂ ಮೊದಲು ಹಿಂದೊಮ್ಮೆ ಅನಿಲ್ ವಿಜ್ ನೆಹರೂ ಮತ್ತು ಮಹಾತ್ಮಾ ಗಾಂಧಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಭಗತ್ ಸಿಂಗ್ ಮತ್ತು ಲಾಲಾ ಲಜಪತ್ ರಾಯ್ ನೆಹರೂ, ಗಾಂಧಿಯಂತೆ ಅಲ್ಲ, ಈ ಇಬ್ಬರೂ ಮಹಾನ್ ನಾಯಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು ಎಂದಿದ್ದರು. ಇದೀಗ ಮತ್ತೊಮ್ಮೆ ರಾಹುಲ್ ಗಾಂಧಿ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.