ಕೊರೊನಾದಿಂದ ರಕ್ಷಿಸಿಕೊಳ್ಳಲು ಸೂರ್ಯನ ಬಿಸಿಲಿಗೆ ಮೈಯೊಡ್ಡಿ- ಸಚಿವ ಅಶ್ವಿನಿ ಕುಮಾರ್ ಚೌಬೇ ಸಲಹೆ

ಶುಕ್ರವಾರ, 20 ಮಾರ್ಚ್ 2020 (07:59 IST)
ನವದೆಹಲಿ : ವಿಶ್ವದೆಲ್ಲೆಡೆ ಕೊರೊನಾ ಭೀತಿ ಹೆಚ್ಚಾಗಿದ್ದು, ಈ ನಡುವೆ  ಕೊರೊನಾದಿಂದ ರಕ್ಷಿಸಿಕೊಳ್ಳಲು ಸೂರ್ಯನ ಬಿಸಿಲಿಗೆ ಮೈಯೊಡ್ಡಿ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೇ ಸಲಹೆ ನೀಡಿದ್ದಾರೆ.

ಪ್ರಖರ ಬಿಸಿಲಿನಲ್ಲಿ 10-15 ನಿಮಿಷ ಮೈಯೊಡ್ಡಿದರೆ ಕೊರೊನಾ ವೈರಸ್ ಅನ್ನು ಅಸುನೀಗಿಸಬಹುದು. ಸೂರ್ಯನ ಕಿರಣದಿಂದ ವಿಟಮಿನ್ ಡಿ ಪಡೆಯಬಹುದು. ಈ ಪೋಷಕಾಂಶವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಳಿಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯವರೆಗೆ  ಸೂರ್ಯ ಪ್ರಕಾಶಮಾನವಾಗಿರುತ್ತಾನೆ, ಈ ಅವಧಿಯಲ್ಲಿ ಕನಿಷ್ಠ 10-15 ನಿಮಿಷದವರೆಗಾದರೂ ಸೂರ್ಯನ ಕಿರಣಕ್ಕೆ ಮೈಯೊಡ್ಡಿದರೆ ವಿಟಮಿನ್ ಡಿ ಪಡೆಯಬಹುದು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕೊರೊನಾದಂಥ ವೈರಾಣು ನಾಶವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ