ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ದೇಶದ ಜನತೆ ಮನೆಯಲ್ಲಿ ಇರಬೇಕು- ಪ್ರಧಾನಿ ಮೋದಿ ಮನವಿ

ಶುಕ್ರವಾರ, 20 ಮಾರ್ಚ್ 2020 (07:43 IST)
ನವದೆಹಲಿ : ಕೊರೊನಾ ವೈರಸ್ ದೇಶದ್ಯಾಂತ ಹರಡುತ್ತಿರುವ ಹಿನ್ನಲೆಯಲ್ಲಿ  ಈ ಬಗ್ಗೆ ಜಾಗ್ರತೆ ವಹಿಸುವಂತೆ ಪ್ರಧಾನಿ ಮೋದಿ ಜನತೆಗೆ ಮನವಿ ಮಾಡಿದ್ದಾರೆ.



ನಿನ್ನೆ ರಾತ್ರಿ 8 ಗಂಟೆಗೆ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ಪರಿಸ್ಥಿತಿ 2ನೇ ಮಹಾಯುದ್ಧದ ಸನ್ನಿವೇಶಕ್ಕಿಂತ ಗಂಭೀರವಾಗಿದೆ. ಮುಂದಿನ ಕೆಲವು ವಾರ ಮನೆಯಿಂದ ಹೊರಗೆ ಬರಬೇಡಿ. ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ದೇಶದ ಜನತೆ ಮನೆಯಲ್ಲಿ ಇರಬೇಕು. ಈ ಅವಧಿಯಲ್ಲಿ ಯಾರು ಹೊರಗಡೆ ಓಡಾಡಬೇಡಿ ಎಂದು ಮನವಿ ಮಾಡಿದ್ದಾರೆ.


ಮುಂದಿನ ಕೆಲವು ವಾರ ತುರ್ತು ಸಂದರ್ಭ, ಅಗತ್ಯ  ಸಂದರ್ಭ ಹೊರತುಪಡಿಸಿ ಮನೆಯಿಂದ ಹೊರಗೆ ಬರಬೇಡಿ. ನಿಮಗೆ ನೀವು ಸ್ವಯಂ ಗೃಹ ನಿರ್ಬಂಧ ವಿಧಿಸಿಕೊಳ್ಳಿ. ಅದರಲ್ಲೂ 65 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರಗೆ ಬರಲೇಬೇಡಿ ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ