ಉತ್ತರ ಪ್ರದೇಶ ತಹಶೀಲ್ದಾರ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನ

Sampriya

ಬುಧವಾರ, 3 ಸೆಪ್ಟಂಬರ್ 2025 (17:27 IST)
ಲಕ್ನೋ: ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಯೀಬ್ ತಹಶೀಲ್ದಾರ್ ಅವರು ಬುಧವಾರ ಗುಂಡು ಹಾರಿಸಿಕೊಂಡು ತಮ್ಮ ಸರ್ಕಾರಿ ನಿವಾಸದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ. 

ಸದರ್‌ ತಹಶೀಲ್‌ನಲ್ಲಿ ನಿಯೋಜಿತರಾಗಿದ್ದ ರಾಜ್‌ಕುಮಾರ್‌ ಅವರು ತಮ್ಮ ಅಧಿಕೃತ ನಿವಾಸದ ಕೋಣೆಯೊಳಗೆ ಬೀಗ ಹಾಕಿಕೊಂಡು ಗುಂಡು ಃಆರಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಮನೆಯವರು ಬಾಗಿಲು ಒಡೆದು ಗಂಭೀರ ಸ್ಥಿತಿಯಲ್ಲಿದ್ದ ರಾಜ್‌ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರು. ಪರಿಸ್ಥಿತಿ ಗಂಭೀರವಾಗಿದೆ ಎಂದು ಎಸ್‌ಪಿ ಅಭಿಷೇಕ್‌ ಝಾ ಹೇಳಿದ್ದಾರೆ. 

ಇನ್ನೂ ಆತ್ಮಹತ್ಯೆ ಯತ್ನದ ಹಿಂದಿನ ಕಾರಣ ಏನೆಂದು ಇನ್ನೂ ತಿಳಿದುಬಂದಿಲ್ಲ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ