ಹೊಸ ಮೋಟಾರ್ ವಾಹನ ನಿಯಮ ಜಾರಿಗೆ ತರಲು ಕಾರಣ ತಿಳಿಸಿದ ಸಚಿವ ನಿತಿನ್ ಗಡ್ಕರಿ

ಶುಕ್ರವಾರ, 6 ಸೆಪ್ಟಂಬರ್ 2019 (14:01 IST)
ನವದೆಹಲಿ : ದೇಶದಾದ್ಯಂತ ಹೊಸ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ ಜಾರಿಯಾಗಿದ್ದು, ಇದರಿಂದ ನಿಯಮ ಉಲ್ಲಂಘಿಸಿದ  ವಾಹನ ಸವಾರರಿಗೆ ಪೊಲೀಸರು ಬಾರೀ ದಂಡ ವಿಧಿಸುತ್ತಿದ್ದಾರೆ.




ಇದಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಇದೀಗ ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ನಿಯಮ ಜಾರಿಗೆ ತರಲು ಕಾರಣವೇನು ಎಂಬ ಮಾಹಿತಿಯನ್ನು  ಬಹಿರಂಗಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ದೇಶದಲ್ಲಿ ಪ್ರತಿವರ್ಷ 5 ಲಕ್ಷಕ್ಕೂ ಅಧಿಕ ರಸ್ತೆ ಅಪಘಾತಗಳು ಸಂಭವಿಸಿ, 1.5 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಈ ಪೈಕಿ ಶೇ.65 ರಷ್ಟು ಮಂದಿ 18 ರಿಂದ 35 ರ ವಯೋಮಾನದವರಾಗಿದ್ದ ಕಾರಣ ಇಂತಹ ಯುವ ಜೀವಗಳನ್ನು ನಾವು ಉಳಿಸಲು ಈ ನಿಯಮ ಜಾರಿಗೆ ತಂದಿರುವುದಾಗಿ ಹೇಳಿದ್ದಾರೆ.


ಯಾವುದೇ ದಾಖಲೆ ಪತ್ರಗಳಿಲ್ಲದೇ ವಾಹನ ಚಾಲನೆ ಮಾಡಿ ಅಪಘಾತ ಮಾಡಿದರೆ ಅದಕ್ಕೆ ಯಾರು ಹೊಣೆಯಾಗುತ್ತಾರೆ. ಸಾರ್ವಜನಿಕರು ಕಾನೂನು, ಸಂಚಾರಿ ನಿಯಮಗಳನ್ನು ಪಾಲಿಸಿದರೆ ಯಾರಿಗೂ ದಂಡ ವಿಧಿಸುವ ಪ್ರಮೇಯವೇ ಇರುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ