ಎಕ್ಸ್‌ಪ್ರೆಸ್‌ವೇನಲ್ಲಿ ನಡೆದ ಅಪಘಾತಗಳಿಗೆ ಕೊನೆಗೂ ಕಾರಣ ತಿಳಿಸಿದ ಹೆದ್ದಾರಿ ಸಚಿವಾಲಯ

ಶುಕ್ರವಾರ, 4 ಆಗಸ್ಟ್ 2023 (07:17 IST)
ನವದೆಹಲಿ : ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ನಡೆದ ಅಪಘಾತಗಳಿಗೆ ಕಾರಣವೇನೆಂಬುದನ್ನು ಕೇಂದ್ರ ಹೆದ್ದಾರಿ ಸಚಿವಾಲಯ ತಿಳಿಸಿದೆ.

ಕಳೆದ ಆರು ತಿಂಗಳಲ್ಲಿ ನಡೆದ ಅಪಘಾತಗಳ ಪೈಕಿ ಮೂರನೇ ಒಂದರಷ್ಟು ಪ್ರಕರಣಗಳಲ್ಲಿ ದ್ವಿಚಕ್ರ ವಾಹನಗಳಿವೆ. ಒಟ್ಟಾರೆಯಾಗಿ 65-75% ಅಪಘಾತಗಳು ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಚಲಿಸುವ ಕಾರುಗಳು ಮತ್ತು ಬೈಕ್ಗಳಿಂದ ಉಂಟಾಗಿವೆ ಎಂದು ಕೇಂದ್ರ ಹೆದ್ದಾರಿ ಸಚಿವಾಲಯ ಮಾಹಿತಿ ನೀಡಿದೆ.

ಈ ಎಕ್ಸ್ಪ್ರೆಸ್ವೇಯ ವೇಗಮಿತಿ 80 ರಿಂದ 100 ಕಿಲೋಮೀಟರ್ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಎಕ್ಸ್ಪ್ರೆಸ್ವೇನ ಎರಡೂ ಬದಿಗಳಲ್ಲಿರುವ ಟೋಲ್ ರಹಿತ ಸರ್ವೀಸ್ ರಸ್ತೆ ಬಳಸಬಹುದು ಎಂದಿರುವ ಸಚಿವಾಲಯ, ಬಿಡದಿ, ರಾಮನಗರ, ಚನ್ನಪಟ್ಟಣ, ಮಂಡ್ಯಗಳಲ್ಲಿ ರೈಲ್ವೇ ಓವರ್ ಬ್ರಿಡ್ಜ್ ಕಾರಣ ಸರ್ವೀಸ್ ರಸ್ತೆ ಇಲ್ಲ ಎಂಬುದನ್ನು ಒಪ್ಪಿಕೊಂಡಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ