ಶಾಲೆಗೆ ಹೋಗುವುದನ್ನು ತಪ್ಪಿಸಲು ಗೆಳೆಯನ ಕೊಂದ ಅಪ್ರಾಪ್ತ!
ಶಾಲೆಗೆ ಹೋಗುವುದನ್ನು ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕೆಂದು 16 ವರ್ಷದ ಬಾಲಕ ತನ್ನ 13 ವರ್ಷದ ಗೆಳೆಯನ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ.
ಕಳೆದ ಐದು ತಿಂಗಳಿನಿಂದ ಆತ ಕೊಲೆಗಾಗಿ ಸಂಚು ರೂಪಿಸಿದ್ದ. ಅದರಂತೆ ಗೆಳೆಯನನ್ನು ಪುಸಲಾಯಿಸಿ ಹೆದ್ದಾರಿಗೆ ಕರೆದುಕೊಂಡು ಬಂದ ಆರೋಪಿ ಅಲ್ಲೇ ಬಿದ್ದಿದ್ದ ಗ್ಲಾಸ್ ಚೂರಿನಿಂದ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ. ಸ್ಥಳೀಯರು ಮೃತದೇಹ ನೋಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಪೊಲೀಸರು ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ.