ಸಹಪಾಠಿಯ ಮೇಲೆಯೇ ಸಾಮೂಹಿಕ ಅತ್ಯಾಚಾರವೆಸಗಿದ ವಿದ್ಯಾರ್ಥಿಗಳು

ಶನಿವಾರ, 9 ಜುಲೈ 2022 (09:10 IST)
ಚೆನ್ನೈ: ಸಹಪಾಠಿ ಬಾಲಕಿ ಮೇಲೆಯೇ 10 ನೇ ತರಗತಿಯ ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರವೆಸಗಿದ ಹೀನ ಕೃತ್ಯ ತಮಿಳುನಾಡಿನಲ್ಲಿ ನಡೆದಿದೆ.

ಬಾಲಕಿ ಗೆಳೆಯನ ಜೊತೆಗಿದ್ದ ಫೋಟೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿದ ವಿದ್ಯಾರ್ಥಿಗಳು ಅತ್ಯಾಚಾರವೆಸಗಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.

ಶಾಲೆಯ ಹಿಂದಿದ್ದ ಪಾಳು ಮನೆಗೆ ಬಾಲಕಿಯನ್ನು ಕರೆಸಿಕೊಂಡು ಅತ್ಯಾಚಾರವೆಸಗಲಾಗಿದೆ. ಈ ಕೃತ್ಯವನ್ನು ಓರ್ವ ವಿಡಿಯೋ ಮಾಡಿ ಎಲ್ಲರಿಗೂ ಹಂಚಿಕೊಂಡಿದ್ದಾನೆ. ಘಟನೆ ಬಳಿಕ ಬಾಲಕಿ ನಡೆದ ವಿಚಾರವನ್ನು ತಾಯಿಗೆ ಹೇಳಿದ್ದಾಳೆ. ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ