ಮದ್ಯದ ಅಮಲಿನಲ್ಲಿ ಫೋನ್ ಗಾಗಿ ಕಿತ್ತಾಟ: ಕೊಲೆಯಲ್ಲಿ ಅಂತ್ಯ

ಶುಕ್ರವಾರ, 8 ಜುಲೈ 2022 (11:01 IST)
ನವದೆಹಲಿ: ಮದ್ಯದ ನಶೆಯಲ್ಲಿ ಮನುಷ್ಯ ತಾನೇನು ಮಾಡುತ್ತೇನೆಂಬುದನ್ನು ಮರೆಯುತ್ತಾನೆ. ಇದೀಗ ವ್ಯಕ್ತಿಗಳಿಬ್ಬರು ಮದ್ಯದ ನಶೆಯಲ್ಲಿ ಕಿತ್ತಾಡಿಕೊಂಡಿದ್ದು ಓರ್ವನನ್ನು ಕೊಲೆ ಮಾಡಲಾಗಿದೆ.

ಆರೋಪಿ ಸಣ್ಣದೊಂದು ಬೇಕರಿ ನಡೆಸುತ್ತಿದ್ದ. ಮೃತ ವ್ಯಕ್ತಿ ಈತನ ಅಂಗಡಿಗೆ ಮಾಮೂಲಾಗಿ ಬರುತ್ತಿದ್ದ ಗ್ರಾಹಕನಾಗಿದ್ದ. ಇದೇ ಸ್ನೇಹದಲ್ಲಿ ಇಬ್ಬರೂ ನಾಲ್ಕು ಬಾಟಲಿ ಮದ್ಯ ಖರೀದಿಸಿ ಜೊತೆಗೇ ಕೂತು ಕುಡಿದಿದ್ದಾರೆ.

ಮೂರು ಬಾಟಲಿ ಮದ್ಯ ಖಾಲಿಯಾದ ಬಳಿಕ ವರಾತ ಶುರುವಾಗಿದೆ. ಮೃತ ವ್ಯಕ್ತಿ ಆರೋಪಿಯ ಫೋನ್ ಪಡೆದು ಯಾರಿಗೋ ಮಾತನಾಡಲು ಶುರು ಹಚ್ಚಿಕೊಂಡಿದ್ದಾನೆ. ಆರೋಪಿ ವಾಪಸ್ ಕೇಳಿದಾಗ ಕೊಡದೇ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಇಬ್ಬರ ನಡುವೆ ಕಿತ್ತಾಟವಾಗಿದೆ. ಇದೇ ಸಿಟ್ಟಿನಲ್ಲಿ ಆರೋಪಿ ತಲೆಗೆ ಹೊಡೆದಿದ್ದಾನೆ. ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಬಳಿಕ ಏನೂ ನಡೆದೇ ಇಲ್ಲವೆಂಬಂತೆ ಅಲ್ಲಿಂದ ಪರಾರಿಯಾಗಿದ್ದಾನೆ.

ಆದರೆ ಅನಾಥವಾಗಿ ಬಿದ್ದಿದ್ದ ಶವ ನೋಡಿ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳೀಯ ಸಿಸಿಟಿವಿ ಫೂಟೇಜ್ ಗಳನ್ನು ಗಮನಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಲ್ಲದೆ, ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ