ರಾಜ್ಯಸಭೆ ಸದಸ್ಯತ್ವಕ್ಕೆ ಮಿಥುನ್ ಚಕ್ರವರ್ತಿ ರಾಜೀನಾಮೆ? ಯಾಕೆ ಗೊತ್ತಾ?

ಸೋಮವಾರ, 26 ಡಿಸೆಂಬರ್ 2016 (16:30 IST)
ಬಾಲಿವುಡ್ ಹಿರಿಯ ನಟ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಮುಖಂಡ ಮಿಥುನ್ ಚಕ್ರವರ್ತಿ ತಮ್ಮ ರಾಜ್ಯಸಭಾ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
 
ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕ ಡೆರೆಕ್ ಓ ಬ್ರಿಯಾನ್ ಮಾತನಾಡಿ, ಅನಾರೋಗ್ಯದ ಹಿನ್ನೆಲೆಯಲ್ಲಿ ಮಿಥುನ್ ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಮತ್ತು ಅವರ ಕುಟುಂಬದೊಂದಿಗೆ ಪಕ್ಷದ ಉತ್ತಮ ಬಾಂಧವ್ಯ ಮುಂದುವರಿಯಲಿದೆ. ಶೀಘ್ರದಲ್ಲಿ ಚೇತರಿಕೆ ಕಾಣಲಿ ಎಂದು ಹಾರೈಸುವುದಾಗಿ ತಿಳಿಸಿದ್ದಾರೆ.
 
ಮಿಥುನ್ ಚಕ್ರವರ್ತಿ ರಾಜ್ಯಸಭೆಗೆ ಅಪರೂಪದ ಅತಿಥಿಯಾಗಿದ್ದು ಕೇವಲ ಶೇ.10 ರಷ್ಟು ಹಾಜರಾತಿ ಹೊಂದಿದ್ದಾರೆ. ಆದರೆ, ನಿಜವಾದ ಹಾಜರಾತಿ ಇರಬೇಕಾಗಿರುವುದು ಶೇ.79 ರಷ್ಟು ಎಂದು ಸಂಸದೀಯ ಮೂಲಗಳು ತಿಳಿಸಿವೆ.
 
ದಾದಾ ಇಲ್ಲಿಯವರೆಗೆ ರಾಜ್ಯಸಭೆಯ ಯಾವುದೇ ಚರ್ಚೆಯಲ್ಲಿ ಪಾಲ್ಗೊಂಡಿಲ್ಲ ಮತ್ತು ಯಾವುದೇ ಪ್ರಶ್ನೆಯನ್ನು ಕೇಳಿಲ್ಲ, ಖಾಸಗಿ ಸದಸ್ಯ ಮಸೂದೆಯನ್ನು ಕೂಡಾ ಮಂಡಿಸಿಲ್ಲ ಎಂದು ರಾಜ್ಯಸಭೆಯ ಮೂಲಗಳು ತಿಳಿಸಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ