ಶಾಸಕ ಸಿ.ಪಿ. ಯೋಗೀಶ್ವರ್ ಬ್ಯಾಂಕ್ ಅಕೌಂಟನ್ನ ಹ್ಯಾಕ್ ಮಾಡಿ 1.90 ಲಕ್ಷ ರೂ. ದೋಚಿರುವ ಘಟನೆ ನಡೆದಿದೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ಜೆ.ಸಿ. ನಗರದ ಎಸ್`ಬಿಐ ಬ್ಯಾಂಕ್ ಅಕೌಂಟಿನಿಂದ ಹಣ ಡ್ರಾ ಮಾಡಲಾಗಿದೆ. ಸೈಬರ್ ಕಳ್ಳರು ಹಣ ಡ್ರಾ ಮಾಡಿದ ಬಗ್ಗೆ ಯೋಗೀಶ್ವರ್`ಗೆ ಮೆಸೇಜ್ ಬಂದಿದೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆಂದು ತಿಳಿದುಬಂದಿದೆ.
ಸದ್ಯ, ಕಾರ್ಯ ಪ್ರೌವೃತ್ತರಾಗಿರುವ ಪೊಲೀಸರು ಬ್ಯಾಂಕ್ ಸಿಬ್ಬಂದಿಗೂ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎನ್ನಲಗಿದೆ.