ರಕ್ಷಣಾ ಪಡೆಗಳ ಆಧುನೀಕರಣಕ್ಕೆ ಬಂಡವಾಳ ಗಳಿಕೆಗಾಗಿಯೇ ರಕ್ಷಣಾ ಸಚಿವಾಲಯ 1.52ಲಕ್ಷ ಕೋಟಿ ರೂ. ಅನುದಾನ ಮೀಸಲಿಟ್ಟಿದೆ.
ಈ ಮೊತ್ತದಲ್ಲಿ ಶೇ.68ರಷ್ಟನ್ನು ದೇಶೀಯ ಸಂಸ್ಥೆಗಳಿಂದಲೇ ಶಸ್ತ್ರಾಸ್ತ್ರಗಳ ಖರೀದಿಗೆ ಮೀಸಲಿಡಲು ನಿರ್ಧರಿಸಲಾಗಿದೆ.
ರಕ್ಷಣಾ ಪಡೆಗಳ ಆಧುನೀಕರಣಕ್ಕೆ ಮೀಸಲಿಟ್ಟಿರೋ ಅನುದಾನ ಕಳೆದ ಸಾಲಿಗಿಂತ 1.35 ಲಕ್ಷ ಕೋಟಿ ರೂ. ಅಂದ್ರೆ ಶೇ.13ರಷ್ಟು ಹೆಚ್ಚಿದೆ.
ಕಳೆದ ಸಾಲಿನಲ್ಲಿ ಇದಕ್ಕಾಗಿ ರಕ್ಷಣಾ ಸಚಿವಾಲಯ 2.33 ಲಕ್ಷ ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಈ ವರ್ಷ 2.39 ಲಕ್ಷ ಕೋಟಿ ರೂ. ಇಡಲಾಗಿದೆ.