ಮೋದಿ ಸಾಕ್ಷ್ಯಚಿತ್ರ : ಜೆಎನ್‍ಯುನಲ್ಲಿ ಇಂಟರ್ನೆಟ್, ವಿದ್ಯುತ್ ಸ್ಥಗಿತ

ಬುಧವಾರ, 25 ಜನವರಿ 2023 (08:53 IST)
ನವದೆಹಲಿ : ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಒಕ್ಕೂಟದ ಕಚೇರಿಯಲ್ಲಿ ವಿದ್ಯುತ್ ಹಾಗೂ ಇಂಟರ್ನೆಟ್ ಸ್ಥಗಿತಗೊಂಡಿದ್ದರಿಂದ ಇಂದು ರಾತ್ರಿ ಪ್ರದರ್ಶನಗೊಳ್ಳಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ನಿಷೇಧಿತ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಸ್ಥಗಿತಗೊಂಡಿದೆ.

ವಿದ್ಯಾರ್ಥಿಗಳು ಸಾಕ್ಷ್ಯಚಿತ್ರ ಪ್ರದರ್ಶನವು ಇಂದು (ಮಂಗಳವಾರ) ರಾತ್ರಿ 9 ಗಂಟೆಗೆ ಪ್ರಾರಂಭಿಸಲು ಯೋಜಿಸಿದ್ದರು. ಆದರೆ ಜೆಎನ್ಯು ಆಡಳಿತ ಮಂಡಳಿ ಸ್ಕ್ರೀನಿಂಗ್ಗೆ ಅನುಮತಿ ನೀಡಿರಲಿಲ್ಲ. ಅಷ್ಟೇ ಅಲ್ಲದೇ ಸಾಕ್ಷ್ಯಚಿತ್ರ ಪ್ರದರ್ಶಿಸಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿತ್ತು.

ಸಾಕ್ಷ್ಯಚಿತ್ರವನ್ನು ವೀಕ್ಷಿಸಿದರೆ ಯಾವುದೇ ನಿಯಮ ಉಲ್ಲಂಘನೆಯಾಗುವುದಿಲ್ಲ. ಜೊತೆಗೆ ಕೋಮು ಸೌಹಾರ್ದವನ್ನು ಹಾಳಾಗುವುದಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದ್ದರು.

ಸಿಪಿಎಂನ ವಿದ್ಯಾರ್ಥಿ ಘಟಕವಾದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಆಯೇಶಿ ಘೋಷ್, ಇಂದು ನಾವು ಖಂಡಿತವಾಗಿಯೂ ಸಾಕ್ಷ್ಯಚಿತ್ರವನ್ನು ನೋಡುತ್ತೇವೆ. ನಾವು ಅದನ್ನು ಕ್ಯೂಆರ್ ಕೋಡ್ ಮೂಲಕ ನೋಡುತ್ತೇವೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ