ಪ್ರೀತಿಸುವ ಹುಡುಗಿ ಸಿಕ್ಕರೆ ಮದುವೆ ಆಗುತ್ತೇನೆ : ರಾಹುಲ್ ಗಾಂಧಿ

ಮಂಗಳವಾರ, 24 ಜನವರಿ 2023 (11:44 IST)
ನವದೆಹಲಿ : ಬುದ್ಧಿವಂತ ಹಾಗೂ ಪ್ರೀತಿಸುವ ಹುಡುಗಿ ಸಿಕ್ಕರೇ ನಾನು ಮದುವೆ ಆಗುತ್ತೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದರು.

ಸದ್ಯ ಭಾರತ್ ಜೋಡೋ ಯಾತ್ರೆ ಕಾಶ್ಮೀರದಲ್ಲಿದೆ. ಈ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿದ 52 ವರ್ಷದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಮದುವೆಯ ಬಗ್ಗೆ ಹಾಗೂ ತಾವು ಮದುವೆ ಆಗುವ ವಧು ಹೇಗೆ ಇರಬೇಕು ಎನ್ನುವುದರ ಕುರಿತು ಸಂಕ್ಷಿಪ್ತವಾಗಿ ಮತ್ತೊಮ್ಮೆ ತಿಳಿಸಿದ್ದಾರೆ.

ಸರಿಯಾದ ಹುಡುಗಿ ಸಿಕ್ಕರೆ ನಾನು ಮದುವೆ ಆಗುತ್ತೇನೆ. ಬುದ್ಧಿವಂತೆ ಹಾಗೂ ಪ್ರೀತಿಸುವ ಹುಡುಗಿಯಾಗಿದ್ದಾರೆ ಸಾಕು. ನನ್ನ ಹೆತ್ತವರು ಪ್ರೀತಿಸುವುದನ್ನು ಹತ್ತಿರದಿಂದ ನೋಡಿದ್ದರಿಂದ ನನಗೆ ಹೆಚ್ಚು ನಿರೀಕ್ಷೆಗಳಿವೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ