ನೋಟು ನಿಷೇಧಧ ನಂತ್ರ ಮೋದಿಗೆ ಜೀವ ಬೆದರಿಕೆಯಿದೆ: ಬಾಬಾ ರಾಮದೇವ್

ಶನಿವಾರ, 19 ನವೆಂಬರ್ 2016 (16:01 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ತೆಗೆದುಕೊಂಡ ನೋಟು ನಿಷೇಧ ನಿರ್ಧಾರ ಸ್ವಾಗತಾರ್ಹವಾಗಿದೆ. ಆದರೆ, ಇದರಿಂದ ಅವರ ಜೀವಕ್ಕೆ ಬೆದರಿಕೆ ಎದುರಾಗುವ ಸಾಧ್ಯತೆಗಳಿವೆ ಎಂದು ಯೋಗ ಗುರು ಬಾಬಾ ರಾಮದೇವ್ ಆತಂಕ ವ್ಯಕ್ತಪಡಿಸಿದ್ದಾರೆ.
 
ಕೇಂದ್ರ ಸರಕಾರದ ನೋಟು ನಿಷೇಧ ಕ್ರಮದಿಂದಾಗಿ ಡ್ರಗ್ ಮಾಫಿಯಾ, ಉಗ್ರರು ಮತ್ತು ತೆರಿಗೆ ವಂಚಕರಿಂದ ಮೋದಿ ಜೀವಕ್ಕೆ ಬೆದರಿಕೆಯಿದೆ ಎಂದು ತಿಳಿಸಿದ್ದಾರೆ.
 
ಕೇಂದ್ರ ಸರಕಾರ ತೆಗೆದುಕೊಂಡ ನಿರ್ಧಾರದಿಂದ ಕೆಲವರಿಗೆ ಸಂಕಷ್ಟ ಎದುರಾಗಿದ್ದರೂ ಅದನ್ನು ತಡೆದುಕೊಂಡು ಸರಕಾರಕ್ಕೆ ಸಹಕಾರ ನೀಡಬೇಕು. ಕೆಲವು ದಿನಗಳ ನಂತರ ದೇಶದ ಆರ್ಥಿಕತೆಯಲ್ಲಿ ಸುಧಾರಣೆಯಾಗಲಿದೆ ಎಂದರು.
 
500 ಮತ್ತು 1000 ರೂ. ನೋಟುಗಳ ನಿಷೇಧಿಂದಾಗಿ ಭ್ರಷ್ಟಾಚಾರ, ಕಪ್ಪು ಹಣ, ಭಯೋತ್ಪಾದನೆ ಮತ್ತು ನಕಲಿ ನೋಟು ಹಾವಳಿಯನ್ನು ತಡೆಯಲು ಸಾಧ್ಯವಾಗುತ್ತದೆ. ಇದೀಗ ಉಗ್ರರು ಕಂಗಾಲಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
 
ಧಾರ್ಮಿಕ ನಾಯಕರಾದ ಷಷ್ಠ ಪೀಠಾಧೀಶ್ವರ ಗೋಸ್ವಾಮಿ ಶ್ರೀ ದ್ವಾರಕೇಶಲಾಲ್‌ಜಿಯವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯೋಗ ಗುರು ಬಾಬಾ ರಾಮದೇವ್ ಆಗಮಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ