ಮೋದಿಯ ವಿಪಕ್ಷ ಮುಕ್ತ ಭಾರತ ಕನಸು ನನಸಾಗಲ್ಲ: ಶರದ್ ಯಾದವ್

ಶುಕ್ರವಾರ, 15 ಸೆಪ್ಟಂಬರ್ 2017 (19:32 IST)
ವಿಪಕ್ಷ ಮುಕ್ತ ಭಾರತ ಎನ್ನುವ ಪ್ರಧಾನಿ ನರೇಂದ್ರ ಮೋದಿಯ ಕನಸು ಯಾವತ್ತೂ ನನಸಾಗುವುದಿಲ್ಲ ಎಂದು ಜೆಡಿಯು ಬಂಡಾಯ ನಾಯಕ ಶರದ್ ಯಾದವ್ ಹೇಳಿದ್ದಾರೆ.
ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್‌ಡಿಎ ಸೇರ್ಪಡೆಯಾದ ನಂತರ ಶರದ್ ಯಾದವ್ ಸಾಂಜಿ ವಿರಾಸತ್ ಬಚಾವೋ ಎನ್ನುವ ಸಂಘಟನೆ ಆರಂಭಿಸಿದ್ದರು.   
 
ಸಭೆಯಲ್ಲಿ ವಿಪಕ್ಷಗಳ ನಾಯಕರಾದ ಸಿಪಿಐ(ಎಂ) ಸೀತಾರಾಮ್ ಯಚೂರಿ, ಕಾಂಗ್ರೆಸ್ ಪಕ್ಷದ ಆನಂದ್ ಶರ್ಮಾ ಮತ್ತು ಸಚಿನ್ ಪೈಲಟ್, ಟಿಎಂಸಿ ಸುಖೇಂದು ರಾಯ್ ಮತ್ತು ಆರ್‌ಎಲ್‌ಡಿ ಪಕ್ಷದ ಜಯಂತ್ ಚೌಧರಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
 
ಬಿಜೆಪಿಯವರಿಗೆ ಕಾಂಗ್ರೆಸ್ ಮುಕ್ತ ಭಾರತ ಬೇಕಾಗಿಲ್ಲ. ವಿಪಕ್ಷ ಮುಕ್ತ ಭಾರತ ಬೇಕಾಗಿದೆ. ಆದರೆ. ಇದು ಜೀವನದಲ್ಲಿ ಸಾಧ್ಯವಿಲ್ಲ. ನಮ್ಮ ಪ್ರಜಾಪ್ರಭುತ್ವದ ಸಂಸ್ಕ್ರತಿಯನ್ನು ಉಳಿಸಲು ನಾವು ಪರಸ್ಪರ ಕೈ ಜೋಡಿಸುತ್ತೇವೆ ಎಂದು ತಿರುಗೇಟು ನೀಡಿದ್ದಾರೆ. 
 
ಧರ್ಮದೊಂದಿಗೆ ರಾಜಕೀಯ ಬೆರೆತಾಗ ಭಾರತ ಕೂಡಾ ಇರಾಕ್, ಸಿರಿಯಾ ಮತ್ತು ಪಾಕಿಸ್ತಾನ ದೇಶಗಳಾಂತಾಗುತ್ತದೆ ಎಂದು ರಾಜಕೀಯದ ಕೆಲಸ ಜನರ ಸೇವೆ ಮಾಡುವುದು. ವಿಪಕ್ಷಗಳನ್ನು ತುಳಿಯುವುದು ಎಂದು ಅರ್ಥವಲ್ಲವೆಂದು ಜೆಡಿಯು ಬಂಡಾಯ ಮುಖಂಡ ಶರದ್ ಯಾದವ್ ಕಿಡಿಕಾರಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ