ಬೋಹ್ರಾ ಸಮುದಾಯದ ಶಿಕ್ಷಣ ಸಂಸ್ಥೆಯನ್ನು ಉದ್ಘಾಟಿಸಿದ ಮೋದಿ

ಶನಿವಾರ, 11 ಫೆಬ್ರವರಿ 2023 (12:23 IST)
ಮುಂಬೈ : ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮುಂಬೈಗೆ ಭೇಟಿ ನೀಡಿದ್ದ ಸಂದರ್ಭ ದಾವೂದಿ ಬೋಹ್ರಾ ಮುಸ್ಲಿಂ ಸಮುದಾಯದ ಶಿಕ್ಷಣ ಸಂಸ್ಥೆಯ ಹೊಸ ಕ್ಯಾಂಪಸ್ ಅನ್ನು ಉದ್ಘಾಟಿಸಿದ್ದಾರೆ.
 
ನೂತನವಾಗಿ ಉದ್ಘಾಟನೆಗೊಂಡಿರುವ ಅಲ್ಜಮಿಯಾ-ತುಸ್-ಸೈಫಿಯಾ, ಅಥವಾ ಸೈಫೀ ಅಕಾಡೆಮಿಯು ದಾವೂದಿ ಬೊಹ್ರಾ ಸಮುದಾಯದ ಪ್ರಾಥಮಿಕ ಶೈಕ್ಷಣಿಕ ಕಾಲೇಜಾಗಿದ್ದು, ಇದು ಮುಂಬೈನ ಉಪನಗರವಾದ ಮರೋಲ್ನಲ್ಲಿದೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮೋದಿ, ನಾನು ಇಲ್ಲಿ ಪ್ರಧಾನಿಯಾಗಿ ಅಥವಾ ಸಿಎಂ ಆಗಿ ಬಂದಿಲ್ಲ. ಬಹುಶಃ ಕೆಲವರಿಗಷ್ಟೇ ಸಿಗುವ ಭಾಗ್ಯ ನನಗೆ ಸಿಕ್ಕಿದೆ. ನಾನು ಈ ಕುಟುಂಬದೊಂದಿಗೆ 4 ತಲೆಮಾರುಗಳಿಂದ ಸಂಪರ್ಕ ಹೊಂದಿದ್ದೇನೆ. ಈ ಎಲ್ಲಾ 4 ತಲೆಮಾರಿನವರು ನನ್ನ ಮನೆಗೆ ಭೇಟಿ ನೀಡಿದ್ದಾರೆ ಎಂದು ನುಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ