ಅಮೇರಿಕಾ ಸಂಸತ್ ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ

ಶುಕ್ರವಾರ, 29 ಏಪ್ರಿಲ್ 2016 (17:33 IST)
ಮುಂದಿನ ತಿಂಗಳು ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ಸಂಸತ್ ಉದ್ದೇಶಿಸಿ ಭಾಷಣ ಮಾಡುವಂತೆ ಅಮೆರಿಕಾ ಸ್ಪೀಕರ್ ಪಾಲ್ ರ್ಯಾನ್  ಆಹ್ವಾನ ನೀಡಿದ್ದಾರೆ.
 
ಅಮೇರಿಕಾದ ಸಂಸತ್‌ನಲ್ಲಿ ಮೋದಿ ಅವರ ಭಾಷಣ ಭಾರತ ಮತ್ತು ಅಮೇರಿಕ ದೇಶಗಳ ನಡುವಿನ ಸೌಹಾರ್ದತೆಗೆ ಪುಷ್ಟಿ ನೀಡುತ್ತದೆ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಚುನಾಯಿತ ಪ್ರತಿನಿಧಿಯ ಮಾತುಗಳನ್ನು ಆಲಿಸುವುದು ನಿಜಕ್ಕೂ ವಿಶೇಷ ಅವಕಾಶ ಎಂದು ಅಮೆರಿಕನ್ ಸ್ಪೀಕರ್ ಹೇಳಿದ್ದಾರೆ. 
 
ಮನಮೋಹನ್ ಸಿಂಗ್ (2005 ಜುಲೈ 19),  ಅಟಲ್ ಬಿಹಾರಿ ವಾಜಪೇಯಿ (ಸೆಪ್ಟಂಬರ್ 14, 2000 ),  ಪಿ.ವಿ ನರಸಿಂಹ ರಾವ್ (1994 ಮೇ 18 ),  ರಾಜೀವ್ ಗಾಂಧಿ (1985 ನೇ ಜುಲೈ 13 ) ಅಮೆರಿಕಾ ಸಂಸತ್ ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿಗಳಾಗಿದ್ದಾರೆ.

ವೆಬ್ದುನಿಯಾವನ್ನು ಓದಿ