ಮೋದಿ ದೇವರಲ್ಲ, ಸದನಕ್ಕೆ ಬಂದು ಮಾತನಾಡಲಿ : ಮಲ್ಲಿಕಾರ್ಜುನ ಖರ್ಗೆ

ಶನಿವಾರ, 12 ಆಗಸ್ಟ್ 2023 (14:02 IST)
ನವದೆಹಲಿ : ರಾಜ್ಯಸಭೆಗೆ ಪ್ರಧಾನಮಂತ್ರಿ ಬಂದು ಉತ್ತರ ಕೊಡಲಿ, ಮಣಿಪುರದ ಹಿಂಸಾಚಾರದ ಬಗ್ಗೆ ಮಾತನಾಡಲಿ, ಪ್ರಧಾನಮಂತ್ರಿ ರಾಜ್ಯಸಭೆಗೆ ಬಂದರೆ ಏನಾಗಲಿದೆ? ಮೋದಿ ಏನು ಪರಮಾತ್ಮನೇ? ಅವರೇನು ದೇವರಲ್ಲ.
 
ರಾಜ್ಯಸಭೆಗೆ ಬಂದು ಉತ್ತರ ಕೊಡಲಿ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯಸಭೆಯಲ್ಲಿ ಮಣಿಪುರ ಜನಾಂಗೀಯ ಸಂಘರ್ಷ ಬಗ್ಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಬಂದು ಈ ಬಗ್ಗೆ ಮಾತನಾಡಬೇಕು ಎಂದರು.

ಆಡಳಿತ ಪಕ್ಷದ ಸದಸ್ಯರು ನಿಯಮ 167 ರ ಅಡಿಯಲ್ಲಿ ಚರ್ಚೆ ಮಾಡಲು ಒಪ್ಪಿಕೊಂಡಿದ್ದರು. ಸನದಕ್ಕೆ ಬರುತ್ತಿದ್ದಂತೆ ತಮ್ಮ ನಿಲುವು ಬದಲಾಯಿಸಿದ್ದಾರೆ.

ಮಣಿಪುರ ಬಗ್ಗೆ ಚರ್ಚೆ ಮಾಡದಿರುವುದು ಯಾಕೆ? ಈ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿ. ಪ್ರಧಾನಮಂತ್ರಿಯೂ ಬಂದು ಮಾತನಾಡಲಿ ಎಂದು ಹೇಳಿದರು. ಇದಕ್ಕೆ ಆಡಳಿತ ಪಕ್ಷದ ನಾಯಕರು ಗದ್ದಲ ಮಾಡಿದರು. ಇದರಿಂದ ಆಕ್ರೋಶಗೊಂಡ ಖರ್ಗೆ, ಪ್ರಧಾನಿ ಏನು ದೇವರಲ್ಲ, ಸದನಕ್ಕೆ ಬಂದು ಮಾತನಾಡಲಿ ಎಂದು ಕಟು ಶಬ್ದಗಳಲ್ಲಿ ಟೀಕಿಸಿದರು. ಖರ್ಗೆ ಮಾತಿಗೆ ಸದನದಲ್ಲಿ ಹೆಚ್ಚಿದ ಗದ್ದಲ, ಕಲಾಪ ಮುಂದೂಡಿಕೆ ಮಾಡಲಾಯಿತು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ