ಜನರತ್ತ ಚೂರುಗಳನ್ನು ಎಸೆದು ಚುನಾವಣೆ ಗೆಲ್ಲಬಹುದು, ಆದರೆ ದೇಶ ನಡೆಸಲು ಸಾಧ್ಯವಿಲ್ಲ: ಮೋದಿ ವಾಗ್ದಾಳಿ

ಬುಧವಾರ, 31 ಆಗಸ್ಟ್ 2016 (19:28 IST)
ಚುನಾವಣೆ ಸನ್ನಿಹಿತ ಗುಜರಾತಿನಲ್ಲಿ ನೀರಾವರಿ ಯೋಜನೆಯೊಂದನ್ನು ಉದ್ಘಾಟಿಸಿದ ಬಳಿಕ ಪ್ರಕ್ಷುಬ್ಧ ಪಟೇಲ್ ಸಮುದಾಯದ ಹೃದಯಭಾಗದ ರೈತರನ್ನು ಪ್ರಧಾನಿ ನರೇಂದ್ರ ಮೋದಿ  ಸಂಧಿಸಿದರು.
 
ಸೌರಾಷ್ಟ್ರ ನರ್ಮದಾ ಅವತಾರಣ್ ನೀರಾವರಿ ಯೋಜನೆ ಉದ್ಘಾಟಿಸಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ ಮೋದಿ, ಜನರಿಗೆ ಚೂರುಗಳನ್ನು ಎಸೆದು ಆಮಿಷಗಳನ್ನು ಒಡ್ಡುವ ಮೂಲಕ ಚುನಾವಣೆಗಳನ್ನು ಗೆಲ್ಲಬಹುದು, ಆದರೆ ಹಾಗೆ ಮಾಡುವುದರಿಂದ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂದು ಹೇಳಿದರು.
 
ನಾವು ಕಳೆದ 15 ವರ್ಷಗಳಿಂದ ಪರಿವರ್ತನೆ ಮತ್ತು ಅಭಿವೃದ್ಧಿಗಾಗಿ ಈ ಯೋಜನೆಗೆ ಶ್ರಮ ಪಟ್ಟಿದ್ದೇವೆ ಎಂದು ಮೋದಿ ಸಾನೋಸರಾ ಗ್ರಾಮದಲ್ಲಿ ನೆರೆದಿದ್ದ ಜನತೆಗೆ ತಿಳಿಸಿದರು.
 
ಈ ಹಂತದಲ್ಲಿ ಸೌನಿ ಯೋಜನೆ ಉದ್ಘಾಟನೆಯನ್ನು  ಚುನಾವಣೆಗೆ ಮುನ್ನ ಮತದಾರರಿಗೆ ಸಂದೇಶವನ್ನು ಮುಟ್ಟಿಸುವ ಪ್ರಯತ್ನ ಎಂದು ಕಾಂಗ್ರೆಸ್ ಟೀಕಿಸಿದೆ.

ವೆಬ್ದುನಿಯಾವನ್ನು ಓದಿ