ಸಚಿವರ ಕಾರ್ಯಕ್ಷಮತೆ ವಿಮರ್ಶಿಸಿದ ಪ್ರಧಾನಿ

ಶುಕ್ರವಾರ, 1 ಜುಲೈ 2016 (16:13 IST)
ಸದ್ಯದಲ್ಲಿಯೇ ಕೇಂದ್ರ ಸಚಿವ ಸಂಪುಟ ಪುನರ್ ರಚನೆಯಾಗಲಿದೆ ಎಂಬ ವ್ಯಾಪಕ ನಿರೀಕ್ಷೆಯ ಮಧ್ಯೆ ಪ್ರಧಾನಿ ಮೋದಿ ತಮ್ಮ ಸಚಿವರ ಕಾರ್ಯಕ್ಷಮತೆಯನ್ನು ವಿಮರ್ಶಿಸಿದ್ದಾರೆ. 

ಸಚಿವ ಸಂಪುಟದ ಜತೆಗಿನ ನಾಲ್ಕು ಗಂಟೆಗಳ ದೀರ್ಘ ಅವಧಿಯ ಸಭೆಯಲ್ಲಿ ಪ್ರಧಾನಿ ಬಜೆಟ್ ಅನುದಾನಗಳನ್ನು ಬುದ್ಧಿವಂತಿಕೆಯಿಂದ ಬಳಸಲಾಗಿದೆಯೇ? ಕಳೆದ ಎರಡು ವರ್ಷಗಳಲ್ಲಿ ಯೋಜನೆಯ ಅನುಷ್ಠಾನ, ಯೋಜನೆಗಳ ಲಾಭ ಜನರಿಗೆ ತಲುಪಿಸಲಾಗಿದೆಯೆ?, ಪ್ರತಿ ಸಚಿವಾಲಯ ಅನುಷ್ಠಾನಗೊಳಿಸಿರುವ ಯೋಜನೆಗಳ ಸಂಖ್ಯೆ-ಇವೇ ಮೊದಲಾದ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸಚಿವರ ಕಾರ್ಯಕ್ಷಮತೆಯನ್ನು ಪರೀಕ್ಷಿಸಿದರು.  
 
ಸಭೆಯಲ್ಲಿ ಹಾಜರಿದ್ದವರ ಪ್ರಕಾರ, ಅನುಷ್ಠಾನಗೊಳಿಸಿರುವ ಯೋಜನೆಗಳ ಲಾಭ ಸಾಮಾನ್ಯ ಜನರನ್ನು ತಲುಪುತ್ತಿದೆಯೇ? ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ ಎಂದು ಪ್ರಧಾನಿ ಸೂಚನೆ ನೀಡಿದರು. ಹಲವು ಸಚಿವರು ಅತ್ಯುತ್ತಮ ಬಜೆಟ್ ರಚಿಸುವುದಕ್ಕೆ ಸಂಬಂಧಿಸಿದಂತೆ ಸಲಹೆ ನೀಡಿದರು.
 
ಅನೇಕ ಯೋಜನೆಗಳ ಅನುಷ್ಠಾನದ ಬಗ್ಗೆ ತೃಪ್ತಿಯನ್ನು ವ್ಯಕ್ತ ಪಡಿಸಿದ ಮೋದಿ ಹೊಸ ಯೋಜನೆಗಳನ್ನು ತರುವ ಅವಶ್ಯಕತೆ ಇಲ್ಲ.  ಈಗಿರುವ ಯೋಜನೆಗಳನ್ನೇ ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬೇಕು ಎಂದು ನಿರ್ದೇಶಿಸಿದ್ದಾರೆ. ಹಲವು ದಿನಗಳಿಂದ ನಿರೀಕ್ಷಿಸಲಾಗುತ್ತಿರುವ ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಊಹಾಪೋಹಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ನಡೆದ ವಿಮರ್ಶೆಯನ್ನು ಕೇಂದ್ರ ಸಚಿವರ 'ಪ್ರಗತಿ ಪತ್ರ' ಎಂದು ಅರ್ಥೈಸಲಾಗುತ್ತಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ