ಡೊನಾಲ್ಡ್ ಟ್ರಂಪ್ ಗೆ ಧನ್ಯವಾದ ಸಲ್ಲಿಸಿದ ಮೋದಿ

ಸೋಮವಾರ, 24 ಫೆಬ್ರವರಿ 2020 (14:45 IST)
ಅಹಮದಾಬಾದ್: ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಡೊನಾಲ್ಡ್  ಟ್ರಂಪ್ ಭಾರತವನ್ನು ಹಾಡಿ ಹೊಗಳಿದ್ದಾರೆ. ಇಲ್ಲಿನ ಸಂಸ್ಕೃತಿ, ಹಬ್ಬಗಳ ಕುರಿತು ಟ್ರಂಪ್ ಮಾತನಾಡಿದ್ದಾರೆ.  ಡೊನಾಲ್ಡ್ ಟ್ರಂಪ್ ತಮ್ಮ ಭಾಷಣದ ಮೂಲಕ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ಮೋದಿ ಟ್ರಂಪ್ ಗೆ ಧನ್ಯವಾದ ತಿಳಿಸಿದ್ದಾರೆ.


ಸಂಬಂಧ ವೃದ್ಧಿಗೆ ಅತಿದೊಡ್ಡ ಕಾರಣ ವಿಶ್ವಾಸ. ಭಾರತ, ಅಮೆರಿಕ ನಡುವಿನ ವಿಶ್ವಾಸ ಮತ್ತಷ್ಟು ಹೆಚ್ಚಿದೆ. 1500 ಅನಗತ್ಯ ಕಾನೂನುಗಳನ್ನು ನಾವು ರದ್ದುಗೊಳಿಸಿದ್ದೇವೆ. ಭಾರತ-ಅಮೆರಿಕ ಸ್ವಾಭಾವಿಕ ಸ್ನೇಹಿತರು ಎಂದು ಮೋದಿ  ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ