ಹತ್ಯೆಯಾದ ಕಾರ್ಯಕರ್ತನ ನೆನೆದು ಭಾವುಕರಾಗಿ, ಕೆಲ ಕ್ಷಣ ಭಾಷಣ ನಿಲ್ಲಿಸಿದ ಮೋದಿ

Sampriya

ಮಂಗಳವಾರ, 19 ಮಾರ್ಚ್ 2024 (18:32 IST)
Photo Courtesy X
ಸೇಲಂ: ನಡೆದ ರ್ಯಾಲಿಯಲ್ಲಿ 2013ರಲ್ಲಿ ಹತ್ಯೆಯಾದ ಬಿಜೆಪಿ ಕಾರ್ಯಕರ್ತನನ್ನು ನೆನೆದು ಪ್ರಧಾನಿ ನರೇಂದ್ರ ಮೋದಿ ಅವರು ಕೆಲ ಕ್ಷಣ ಭಾವುಕರಾಗಿ ಭಾಷಣವನ್ನು ನಿಲ್ಲಿಸಿದರು. ಈ ವೇಳೆ  ಮೋದಿ ಮೋದಿ ಎಂದು ಘೋಷಣೆಯನ್ನು ಜನರಿಂದ ಮೊಳಗಿತು.
 
ಲೋಕಸಭೆ ಚುನಾವಣೆಯ ಪೂರ್ವಭಾವಿಯಾಗಿ ತಮಿಳುನಾಡಿನ ಸೇಲಂನಲ್ಲಿ ಇಂದು ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಿವಂಗತ ಬಿಜೆಪಿ ನಾಯಕ ಕೆಎನ್ ಲಕ್ಷ್ಮಣನ್ ಸೇರಿದಂತೆ ಜಿಲ್ಲೆಗೆ ಸಂಬಂಧಿಸಿದ ಮೂವರು ವ್ಯಕ್ತಿಗಳನ್ನು ಸ್ಮರಿಸಿದರು.
 
ಈ ವೇಳೆ ಆಡಿಟರ್ ರಮೇಶ್ ಬಗ್ಗೆ ಮಾತನಾಡುವಾಗ ಕೆಲ ಕ್ಷಣ ಭಾವುಕರಾದರು.
 
"ಇಂದು, ನಾನು ಆಡಿಟರ್ ರಮೇಶ್ ಅವರನ್ನು ನೆನಪಿಸಿಕೊಳ್ಳುತ್ತೇನೆ" ಎಂದು ಪ್ರಧಾನಿ ಮೋದಿ ಒಂದು ನಿಮಿಷಕ್ಕೂ ಹೆಚ್ಚು ಕಾಲ ತಮ್ಮ ಭಾಷಣವನ್ನು ವಿರಾಮಗೊಳಿಸಿದರು. ಕೆಲವು ಸೆಕೆಂಡ್‌ಗಳ ಕಾಲ ಮೌನಕ್ಕೆ ಶರಣಾದ ಪ್ರೇಕ್ಷಕರು ನಂತರ ಮೋದಿಯವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು.
 
ತಮ್ಮ ಭಾಷಣವನ್ನು ಪುನರಾರಂಭಿಸಿದ ಪ್ರಧಾನಿ ಮೋದಿ, "ದುರದೃಷ್ಟವಶಾತ್  ರಮೇಶ್ ನಮ್ಮ ನಡುವೆ ಇಲ್ಲ" ಎಂದು ಹೇಳಿದರು.
 
ಉತ್ತಮ ವಾಗ್ಮಿಯಾಗಿದ್ದ ರಮೇಶ್ ಅವರು ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದರು. ದುಷ್ಕರ್ಮಿಗಳಿಂದ ಅವರು ಕೊಲ್ಲಲ್ಪಟ್ಟರು ಎಂದು ಅವರು ದಿವಂಗತ ಬಿಜೆಪಿ ನಾಯಕನಿಗೆ ಈ ವೇಳೆ ಶ್ರದ್ಧಾಂಜಲಿ ಸಲ್ಲಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ