ಪ್ರಧಾನಿ ಮೋದಿ ಮತ್ತೊಂದು ವಿದೇಶ ಭೇಟಿ: ಯಾವ ದೇಶ, ಯಾವಾಗ ಇಲ್ಲಿದೆ ವಿವರ
ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅಮೆರಿಕಾ ಪ್ರವಾಸ ಮಾಡಿ ಬಂದಿದ್ದರು. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ಮೋದಿ ಮೊದಲ ಭೇಟಿ ಇದಾಗಿತ್ತು. ಈ ವೇಳೆ ಉಭಯ ನಾಯಕರು ಕೆಲವು ಒಪ್ಪಂದಗಳಿಗೆ ಸಹಿ ಹಾಕಿದ್ದರು.
ಇದೀಗ ಮೋದಿ ಮತ್ತೊಂದು ವಿದೇಶ ಪ್ರವಾಸ ಮಾಡಲಿರುವ ಸುದ್ದಿ ಬಂದಿದೆ. ಈ ಬಾರಿ ಮೋದಿ ರಷ್ಯಾಗೆ ಭೇಟಿ ನೀಡಲಿದ್ದಾರೆ. ರಷ್ಯಾದ ಮಾಸ್ಕೋದಲ್ಲಿ ನಡೆಯಲಿರುವ 80 ನೇ ಮಹಾ ದೇಶಭಕ್ತಿಯ ಯುದ್ಧದ ಮೆರವಣಿಗೆ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಲಿದ್ದಾರೆ.
ಬರುವ ಮೇ ತಿಂಗಳಲ್ಲಿ ಮೋದಿ ರಷ್ಯಾಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಅಮೆರಿಕಾದಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರೊಂದಿಗೂ ಮೋದಿ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಈ ವೇಳೆ ಉಭಯ ನಾಯಕರು ಪರಸ್ಪರ ಮುಖಾಮುಖಿಯಾಗಲಿದ್ದಾರೆ ಎನ್ನಲಾಗಿದೆ.