ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮತ್ತೆ ಉತ್ತರಪ್ರದೇಶಕ್ಕೆ ಭೇಟಿ ನೀಡಲಿದ್ದು,
ಅಲ್ಲಿನ ಶಹಜಾನ್ಪುರದಲ್ಲಿ 36,230 ಕೋಟಿ ರೂಪಾಯಿ ವೆಚ್ಚದ ಗಂಗಾ ಎಕ್ಸ್ಪ್ರೆಸ್ ವೇ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದು ಉತ್ತರಪ್ರದೇಶದ ಪಶ್ಚಿಮ ಮತ್ತು ಪೂರ್ವ ಭಾಗವನ್ನು ಸಂಪರ್ಕಿಸಲಿದ್ದು, ದೆಹಲಿ, ಹರ್ಯಾಣ ಮತ್ತು ಬಿಹಾರಕ್ಕೆ ಉತ್ತರಪ್ರದೇಶವನ್ನು ಇನ್ನಷ್ಟು ಸಮೀಪ ಮಾಡಲಿದೆ.
ಈ ಗಂಗಾ ಎಕ್ಸ್ಪ್ರೆಸ್ ವೇ 594 ಕಿಮೀ ಉದ್ದ ಇರಲಿದ್ದು, 2020ರ ನವೆಂಬರ್ 26ರಂದು ಯೋಗಿ ಆದಿತ್ಯನಾಥ್ ಸರ್ಕಾರ ಈ ಯೋಜನೆಗೆ ಅನುಮೋದನೆ ನೀಡಿತ್ತು.