ನವದೆಹಲಿ: ರಾಮಜನ್ಮಭೂಮಿ ಕುರಿತು ಸುಪ್ರೀಂಕೋರ್ಟ್ ಇಂದು ಮಹತ್ತರವಾದ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ನ ತೀರ್ಪನ್ನು ಪ್ರಧಾನಿ ಮೋದಿ ಸ್ವಾಗತಿಸಿದ್ದಾರೆ. ಈ ತೀರ್ಪನ್ನು ಯಾರೊಬ್ಬರ ಗೆಲುವು ಅಥವಾ ಸೋಲು ಎಂದು ಪರಿಗಣಿಸಬಾರದು ಎಂದು ಮೋದಿ ಮನವಿ ಮಾಡಿದ್ದಾರೆ.
ಯಾವುದೇ ಉದ್ವೇಗಕ್ಕೆ ಒಳಗಾಗಬೇಡಿ, ವಿಜೃಂಭಿಸಬೇಡಿ. 130 ಕೋಟಿ ಭಾರತೀಯರು ಶಾಂತಿ, ಸಂಯಮದಿಂದ ವರ್ತಿಸಬೇಕು. ಭಾರತೀಯರು ಶಾಂತಿ ಪ್ರಿಯರು ಎಂದು ಜಗತ್ತಿಗೆ ತೋರಿಸಿ. ಸುಪ್ರೀಂಕೋರ್ಟ್ ನ ಬಗ್ಗೆ ಜನಸಾಮಾನ್ಯರಿಗೆ ವಿಶ್ವಾಸ ಹೆಚ್ಚಿದೆ. ಎಂದು ಟ್ವೀಟರ್ ಮೂಲಕ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.
ರಾಮ ಭಕ್ತಿ, ರಹೀಂ ಭಕ್ತಿಗಿಂತ ಈ ಕ್ಷಣದ ಭಾರತ ಭಕ್ತಿ ಅಗತ್ಯವಾಗಿದೆ. ಶಾಂತಿ, ಸುವ್ಯವಸ್ಥೆ ಹಾಗೂ ಐಕ್ಯತೆಯನ್ನು ಕಾಪಾಡಿ ಎಂದು ದೇಶದ ಜನರಲ್ಲಿ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.