ಅಯೋಧ್ಯೆ: ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ಸುಂದರ ರಾಮಲಲ್ಲಾನ ಮೂರ್ತಿ ಎಲ್ಲರ ಗಮನ ಸೆಳೆಯುತ್ತಿದೆ.
ಈ ಮೂರ್ತಿಯನ್ನು ಸರಿಯಾಗಿ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಷ್ಟೇ ಅನಾವರಣಗೊಳಿಸಲಾಗಿತ್ತು. ಆದರೆ ಅದಕ್ಕೆ ಮೊದಲು ಕಣ್ಣುಗಳನ್ನು ಮುಚ್ಚಿಡಲಾಗಿತ್ತು.
ಜನವರಿ 22 ರಂದು ಲೋಕಾರ್ಪಣೆ ಬಳಿಕ ಸುಂದರ ರಾಮಲಲ್ಲಾನ ಮೂರ್ತಿಯನ್ನು ಎಲ್ಲರಿಗೂ ತೋರಿಸಲಾಯಿತು. ಸರ್ವಾಲಂಕಾರ ಭೂಷಿತನಾದ ಬಾಲ ರಾಮನ ಮೂರ್ತಿ ಎಲ್ಲರ ಗಮನ ಸೆಳೆಯುತ್ತಿದೆ. ಎಲ್ಲರೂ ಅದರಲ್ಲಿರುವ ವಿಶೇಷತೆ ಬಗ್ಗೆ ಹೇಳುತ್ತಿದ್ದಾರೆ.
ಆದರೆ ಎಲ್ಲಕ್ಕಿಂತ ಹೆಚ್ಚು ಈ ವಿಗ್ರಹದಲ್ಲಿ ಗಮನ ಸೆಳೆಯುತ್ತಿರುವುದು ಬಾಲರಾಮನ ಕಣ್ಣುಗಳು. ಕಣ್ಣುಗಳಲ್ಲಿ ಎಷ್ಟು ಜೀವಂತಿಕೆಯಿದೆ ಎಂದರೆ ಅದು ನಿಜವಾದ ಕಣ್ಣುಗಳೇನೋ ಎನ್ನುವಷ್ಟು ನೈಜವಾಗಿದೆ ಎನ್ನುತ್ತಿದ್ದಾರೆ ಭಕ್ತರು. ತಿರುಪತಿ ತಿಮ್ಮಪ್ಪನ ವಿಗ್ರಹ ಬಿಟ್ಟರೆ ಇಷ್ಟು ಸ್ಪಷ್ಟವಾಗಿ ಕಣ್ಣುಗಳನ್ನು ಕೆತ್ತಿರುವುದು ಇಲ್ಲಿಯೇ ಏನೋ ಎನ್ನುವಂತಿದೆ. ವಿಗ್ರಹದ ಸುಂದರತೆ ಹೆಚ್ಚಿಸಿರುವುದಕ್ಕೆ ಈ ಕಣ್ಣುಗಳ ಕೆತ್ತನೆಯೇ ಕಾರಣ ಎನ್ನುತ್ತಿದ್ದಾರೆ ನೆಟ್ಟಿಗರು.