ಪೊಲೀಸರಿಗೆ ದೂರು ನೀಡಿದ ಆರೋಪಿಯ ತಾಯಿ, ತಾನೊಬ್ಬ ವಿಧವೆಯಾಗಿದ್ದು ತನ್ನ ಹಿರಿಯ ಮಗ ನಿರಂತರವಾಗಿ ಮದ್ಯ ಸೇವಿಸಿ ಕಿರುಕುಳ ನೀಡುವುದಲ್ಲದೇ ಹಲ್ಲೆ ಮಾಡುತ್ತಾನೆ. ಕೆಲ ದಿನಗಳ ಹಿಂದೆ ನನ್ನನ್ನು ಕೋಣೆಯೊಳಗೆ ಎಳೆದು ಬಾಗಿಲು ಹಾಕಿ, ನನ್ನನ್ನು ನಗ್ನಗೊಳಿಸಿ ಕಿರುಕುಳ ನೀಡಿದ್ದಾನೆ. ರಕ್ತಸ್ರಾವದ ತನಕ ನನ್ನನ್ನು ಬಿಡಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
ತಾಯಿ ಹಲವಾರು ದಿನಗಳವರೆಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಆಕೆಯ ಗಾಯಗಳಿಗೆ ತಕ್ಷಣದ ಶಸ್ತ್ರಚಿಕಿತ್ಸೆ ನೀಡದಿದ್ದಲ್ಲಿ ಉಳಿಯಲು ಸಾಧ್ಯವಾಗುತ್ತಿರಲಿಲ್ಲ. ಕೃತ್ಯ ಎಸಗಿದ ನಂತರ ಆರೋಪಿ ಪರಾರಿಯಾಗಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.