ಗರ್ಭಪಾತ ಮಾಡಿಸಲು ಒಪ್ಪಿಗೆ ಕೇಳಿ ಸುಪ್ರೀಂ ಮೆಟ್ಟಿಲೇರಿದ ಅವಿವಾಹಿತ ಮಹಿಳೆ

ಬುಧವಾರ, 20 ಜುಲೈ 2022 (08:20 IST)
ನವದೆಹಲಿ: ಗರ್ಭಪಾತ ಮಾಡಿಸಲು ಒಪ್ಪಿಗೆ ನಿರಾಕರಿಸಿದ್ದ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಮಹಿಳೆಯೊಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಘಟನೆ ನಡೆದಿದೆ.

25 ವರ್ಷದ ಮಹಿಳೆ ಸಹಮತದ ಲೈಂಗಿಕ ಕ್ರಿಯೆಯಿಂದ ಈಗ 23 ವಾರದ ಗರ್ಭಿಣಿಯಾಗಿದ್ದಾಳೆ. ಆದರೆ ಮಗು ಮಾಡಿಕೊಳ್ಳಲು ಇಷ್ಟವಿಲ್ಲದ ಕಾರಣ ಮಹಿಳೆ ಕಾನೂನು ರೀತ್ಯಾ ಗರ್ಭಪಾತ ಮಾಡಿಸಿಕೊಳ್ಳಲು ದೆಹಲಿ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದಳು.

ಪ್ರಿಯಕರ ಈಗ ಮದುವೆಯಾಗಲು ನಿರಾಕರಿಸುತ್ತಿದ್ದಾನೆ. ಹೀಗಾಗಿ ಅವಿವಾಹಿತೆಯಾಗಿರುವ ತಾನು ಮಗು ಹೆರಲು ಬಯಸುವುದಿಲ್ಲ. ಇದರಿಂದ ಮಾನಸಿಕವಾಗಿ ನೊಂದಿದ್ದೇನೆ ಎಂದು ಮಹಿಳೆ ಮನವಿ ಸಲ್ಲಿಸಿದ್ದಳು. ಅವಿವಾಹಿತೆ ಎಂಬ ಕಾರಣಕ್ಕೆ ಗರ್ಭಪಾತಕ್ಕೆ ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮನವಿ ತಿರಸ್ಕರಿಸಿತ್ತು. ಹೀಗಾಗಿ ಆಕೆ ಸುಪ್ರೀಂ ಕದ ತಟ್ಟಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ