ಸಾಕು ನಾಯಿಯ ಚೈನು ಕಟ್ಟಿಕೊಂಡು ನೇಣು ಹಾಕಿಕೊಂಡ ವ್ಯಕ್ತಿ: ಕಾರಣವೇನು ಗೊತ್ತಾ

Krishnaveni K

ಬುಧವಾರ, 1 ಜನವರಿ 2025 (11:47 IST)
ನೆಲಮಂಗಲ: ಸಾಕು ನಾಯಿಯ ಚೈನು ಕಟ್ಟಿಕೊಂಡೇ ವ್ಯಕ್ತಿಯೊಬ್ಬರು ನೇಣಿಗೆ ಶರಣಾಗಿದ್ದು ಇದರ ಹಿಂದಿನ ಕಾರಣ ತಿಳಿದರೆ ಶಾಕ್ ಆಗುತ್ತೀರಿ.
 

ನೆಲಮಂಗಲದಲ್ಲಿ ಈ ಘಟನೆ ನಡೆದಿದೆ. 33 ವರ್ಷದ ರಾಜಶೇಖರ್ ಎಂಬವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರ ನಾಯಿಗೆ ಬಳಸುತ್ತಿದ್ದ ಸಂಕೋಲೆಯನ್ನೇ ಕುಣಿಕೆ ಮಾಡಿಕೊಂಡು ಜೀವಕ್ಕೆ ಅಂತ್ಯ ಹಾಡಿದ್ದಾರೆ.

ರಾಜಶೇಖರ್ ಬಳಿ ಜರ್ಮನ್ ಶೆಫರ್ಡ್ ತಳಿಯ ನಾಯಿಯಿತ್ತು. ಆದರೆ ಈ ನಾಯಿ ನಿನ್ನೆ ಮೃತಪಟ್ಟಿತ್ತು. 9 ವರ್ಷಗಳ ಹಿಂದೆ ಈ ನಾಯಿಯನ್ನು ರಾಜಶೇಖರ್ ಖರೀದಿಸಿ ತಂದಿದ್ದರು. ಆ ನಾಯಿಯನ್ನು ಮಗುವಂತೆ ನೋಡಿಕೊಳ್ಳುತ್ತಿದ್ದರು. ಹೀಗಾಗಿ ನಾಯಿ ಸತ್ತ ಸುದ್ದಿ ಅವರನ್ನು ತೀವ್ರ ಬೇಸರಗೊಳಿಸಿತ್ತು.

ಇದೇ ಕಾರಣಕ್ಕೆ ನಾಯಿಯ ಅಂತ್ಯಸಂಸ್ಕಾರ ನೆರವೇರಿಸಿ ಮನೆಗೆ ಬಂದ ಅವರು ಅದೇ ನಾಯಿಯ ಸಂಕೋಲೆಯನ್ನು ಬಳಸಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಇಂದು ಬೆಳಗಿನ ಜಾವ ಅವರ ಮೃತದೇಹ ಪತ್ತೆಯಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ನಾಯಿಯ ಸಾವಿನಿಂದ ಆಗಿರುವ ಆಘಾತಕ್ಕೇ ಕೃತ್ಯವೆಸಗಿರುವುದಾಗಿ ತಿಳಿದುಬಂದಿದೆ. ಇದೀಗ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ನಾಯಿ ಎಂದರೆ ಕೆಲವರು ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಆದರೆ ಅದು ಈ ಮಟ್ಟಿಗಾ ಎಂದು ಅಚ್ಚರಿಯಾಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ