ತಂದೆ ಮತ್ತು ಮಗ ಸೇರಿ ಅಪ್ರಾಪ್ತ ಅವಳಿ ಸಹೋದರಿಯರ ಮೇಲೆ ಒಂದು ವರ್ಷಗಳ ಕಾಲ ಅತ್ಯಾಚಾರವೆಸಗಿದ ವಿಲಕ್ಷಣ, ಹೇಯ ಘಟನೆ ನಡೆದಿದೆ. ಮತ್ತೂ ಘೋರ ಸಂಗತಿ ಎಂದರೆ ನೆರೆಮನೆಯವರ ಈ ಕೀಚಕ ಕೃತ್ಯಕ್ಕೆ ಆ ಬಾಲಕಿಯರಿಬ್ಬರ ತಾಯಿ ಸಹ ಬೆಂಬಲ ನೀಡಿರುವುದು. ಪೀಡಿತರಿಬ್ಬರು ನೇಪಾಳ ಮೂಲದವರಾಗಿದ್ದು, ಅವರ ತಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಇಲ್ಲಿಯೇ ನೆಲೆಯೂರಿದ್ದಾರೆ.
ಅವರ ದೌರ್ಜನ್ಯದಿಂದ ರೋಸಿ ಹೋದ ಬಾಲಕಿಯರಲ್ಲಿ ಒಬ್ಬಳು ತಮ್ಮ ದುರವಸ್ಥೆಯ ಬಗ್ಗೆ ಶಿಕ್ಷಕಿಯಲ್ಲಿ ಹೇಳಿಕೊಂಡಿದ್ದಾಳೆ. ಆಕೆ ಈ ವಿಷಯವನ್ನು ಮಕ್ಕಳ ಹಕ್ಕಿಗಾಗಿ ಕೆಲಸ ಮಾಡುವ ಸ್ವಯಂ ಸೇವಾ ಸಂಸ್ಥೆಗೆ ತಿಳಿಸಿದ್ದಾಳೆ. ಎನ್‌ಜಿಓ ಈ ವಿಷಯವನ್ನು ಪೊಲೀಸ್ ಉಪ ಆಯುಕ್ತಅವರಿಗೆ ತಿಳಿಸಲಾಗಿದ್ದು, ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.