ಕಾರಣ ಸಂಸದರ ವೇತನ ಒಮ್ಮಿಂದೊಮ್ಮೆಲೆ ದಿಢೀರ ಎಂದು ಶೆ. 100 ರಷ್ಟು ಹೆಚ್ಚಳವಾಗಿದ್ದು. ಸಂಸದರ ವೇತನ ಶೇ.100ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದರಿಂದ ಅವರ ಮೂಲ ವೇತನ 50 ಸಾವಿರ ರೂ.ಗಳಿಂದ 1 ಲಕ್ಷಕ್ಕೆ ಏರಿಕೆಯಾಗಲಿದೆ. ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ಸಂಸದರ ವೇತನಗಳ ಹಾಗೂ ಭತ್ಯೆಗಳ ಜಂಟಿ ಸಮಿತಿ ವರದಿ ತಯಾರಿಸಿ ವೇತನ ಹೆಚ್ಚಳಕ್ಕೆ ಶಿಫಾರಸ್ಸು ಮಾಡಿತ್ತು. ಅದರನ್ವಯ ಪ್ರಧಾನ ಮಂತ್ರಿಯವರ ಸಚಿವಾಲಯ ವೇತನ ಹೆಚ್ಚಳದ ನಿರ್ಧಾರ ಕೈಗೊಂಡಿದೆ. ಇತ್ತೀಚಿಗಷ್ಟೆ ಕೇಂದ್ರ ಸರಕಾರ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರ ವೇತನವನ್ನು ಸಹ ದುಪ್ಪಟ್ಟು ಮಾಡಿತ್ತು.
ಸಂಸದರೆಂದರೆ ಅವರ ಖರ್ಚು, ವೆಚ್ಚ ಹೆಚ್ಚಾಗಿಯೇ ಇರುತ್ತದೆ. ಹಾಗಂತ ತಮಗೆ ಎಷ್ಟು ಬೇಕೋ ಅಷ್ಟು ವೇತನ ಹೆಚ್ಚಳ ಮಾಡಿಕೊಳ್ಳಬಹುದಾ? ಚುನಾಯಿತ ಪ್ರತಿನಿಧಿ ಎಂದ ಮೇಲೆ ಏನೂ ಮಾಡಿದರೂ ನಡೆಯುತ್ತವೆಯೇ? ಜನರಿಂದ ಮತ ಪಡೆದು ಆಯ್ಕೆಯಾದ ಜನಪ್ರತಿನಿಧಿಗಳು ಪ್ರಜಾಪ್ರಭುತ್ವವನ್ನೆ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದಿನ ಬೆಳಗಾದರೆ ನೂರಾರು ಸಂಘಟನೆಗಳು ಬೀದಿಗೆ ಬಂದು ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸುತ್ತವೆ. ಪ್ರಾಮಾಣಿಕವಾಗಿ ಬೆವರು ಸುರಿಸಿ ದುಡಿದ ಕಾರ್ಮಿಕನಿಗೆ ಕಾನೂನು ಬದ್ಧವಾಗಿ ದೊರೆಯಬೇಕಾದ ಇಪಿಎಫ್ ಹಣವನ್ನೂ ಕೊಡದೆ ಕಂಪನಿಗಳು ಮೋಸ ಮಾಡುತ್ತವೆ. ಒಪ್ಪತ್ತಿನ ಊಟ ಇಲ್ಲದ ಸಾವಿರಾರು ಕುಟುಂಬ ರಸ್ತೆಗೆ ಬೀಳುತ್ತಿವೆ. ಇವೆಲ್ಲ ಜನಪ್ರತಿನಿಧಿಯಾದವರ ಗಮನಕ್ಕೆ ಬಂದಿರುವ ಸಂಗತಿಗಳೇ. ಆದರೂ ಈವರೆಗೆ ಅವರ ಕುರಿತು ಯಾರೊಬ್ಬರೂ ಧ್ವನಿ ಎತ್ತುತ್ತಿಲ್ಲ. ಆದರೆ, ಈ ಬಡಪಾಯಿಗಳೇ ತುಂಬಿದ ತೆರಿಗೆ ಹಣವನ್ನು ಬೇಕಾಬಿಟ್ಟಿಯಾಗಿ ವೇತನ ರೂಪದಲ್ಲಿ ಪಡೆದು ಬಡ ಸಮುದಾಯವನ್ನು ತುಳಿಯುತ್ತಿದ್ದಾರೆ ಎನ್ನುವುದು ಪ್ರಜ್ಞಾವಂತರ ಮಾತು.
ಚಿಕ್ಕ ಚಿಕ್ಕ ವಿಷಯಕ್ಕೆ ಒಂದುಲ್ಲೊಂದು ಪಕ್ಷದವರು ಪ್ರತಿಭಟನೆ ನಡೆಸುತ್ತಾರೆ. ಆದರೆ ಬಿಜೆಪಿ ಸಂಸದರು ಸಂಸದರ ವೇತನ ಹೆಚ್ಚಳದ ಶಿಫಾರಸ್ಸು ಮಾಡಿರುವ ಕುರಿತು ಯಾವೊಂದು ಪಕ್ಷದಿಂದಲೂ ವಿರೋಧದ ಮಾತು ಹೊರ ಬರುತ್ತಿಲ್ಲ. ಯಾಕೆಂದರೆ, ಎಲ್ಲ ಪಕ್ಷದಲ್ಲಿಯೂ ಸಂಸದರು ಇದ್ದಾರೆ. ಅವರೆಲ್ಲರೂ ಈ ವೇತನ ಹೆಚ್ಚಳಕ್ಕೆ ಒಳಗಾಗುವವರೇ. ಹೀಗಿದ್ದಾಗ ಅವರ್ಯಾಕೆ ಸಾರ್ವಜನಿಕರ ಬೊಕ್ಕಸ ಬರಿದಾಗುತ್ತದೆ ಎನ್ನುತ್ತಾರೆ! ಅಲ್ಲವೇ?