ಪ್ಲಾಸ್ಟಿಕ್ ರೈಸ್ ಎಂಬುದೇ ಸುಳ್ಳು; ಜನರು ಆತಂಕಪಡುವ ಅಗತ್ಯವಿಲ್ಲ

ಶುಕ್ರವಾರ, 9 ಜೂನ್ 2017 (09:19 IST)
ಬೆಂಗಳೂರು: ಪ್ಲಾಸ್ಟಿಕ್ ಅಕ್ಕಿ ಮಾರುಕಟ್ಟೆಗೆ ಬರುತ್ತಿದೆ. ಅಕ್ಕಿಯಲ್ಲಿ ಪ್ಲಾಸ್ಟಿಕ್ ಕಲಬೆರಿಕೆಯಾಗುತ್ತಿದೆ ಎಂದು ದಿನೇ ದಿನೆ ಹೊಸ ಸುದ್ದಿಗಳನ್ನು ನೋಡುತ್ತಲೇ ಇದ್ದೇವೆ. ಎಲ್ಲಿ ನೋಡಿದರೂ ಪ್ಲಾಸ್ಟಿಕ್ ರೈಸ್, ಪ್ಲಾಸ್ಟಿಕ್ ಎಗ್, ಪ್ಲಾಸ್ಟಿಕ್ ಶುಗರ್ ಹೀಗೆ ಎಲ್ಲಾ ಪ್ಲಾಸ್ಟಿಕ್ ಮಯವಾಗುತ್ತಿರುವ ಅತಂಕ ಜನರನ್ನು ಕಾಡುತ್ತಿದೆ. ಆದರೆ ಪ್ಲಾಸ್ಟಿಕ್ ಅಕ್ಕಿ ಉತ್ಪಾದನೆಯೇ ಸಾಧ್ಯವಿಲ್ಲ ಎಂಬ ಮಾಹಿತಿಯೊಂದು ಲಭ್ಯವಾಗಿದೆ.
 
ಪ್ಲಾಸ್ಟಿಕ್ ಕಲಬೆರಿಕೆಯಾಗಿದೆ ಎಂಬ ಅಕ್ಕಿಮಾದರಿಯನ್ನು ತಜ್ನರಬಳಿ ತಪಾಸಣೆ ನಡೆಸಿದಾಗ ಇದು ಪ್ಲಾಸ್ಟಿಕ್ ಕಲಬೆರಕೆಯಲ್ಲ, ಕಳಪೆ ಗುಣಮಟ್ಟದ ಅಕ್ಕಿ ಎಂಬ ಸಂಗತಿ ಹೊರಬಿದ್ದಿದೆ.  ಬೆಂಗಳೂರು ಕೃಷಿ ವಿಜ್ನಾನ ವಿಶ್ವವಿದ್ಯಾಲಯದ ವಿಜ್ನಾನಿಗಳು ಅಕ್ಕಿಯ ಮಾದರಿ ಪರೀಕ್ಷೆ ನಡೆಸಿ ಈ ವಿಷಯ ಡೃಢಪಡಿಸಿದ್ದಾರೆ. ಕಲಬೆರಿಕೆ ಆರೋಪದ ಅಕ್ಕಿಯನ್ನು ರಾಸಾಯನಿಕ ಪರೀಕ್ಷೆಯನ್ನು ನಡೆಸಲಾಗಿದ್ದು, ಭತ್ತಬೆಳೆಯುವ ಸಂದರ್ಭದಲ್ಲಿ ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಪ್ಲಾಸ್ಟಿಕ್ ಕಲಬೆರಿಯಾಗಿದೆ ಎಂಬಂತೆಕಂಡು ಬರುತ್ತದೆ ಎಂದು ಹೇಳಲಾಗಿದೆ.
 
ಇನ್ನು ಕರ್ನಾಟಕ ರೈಸ್ ಮಿಲ್ಲರ್ಸ್ ಅಸೋಸಿಯೇಷನ್ ಪ್ರಕಾರ ಪ್ಲಾಸ್ಟಿಕ್ ರೈಸ್ ಎಂಬುದೇ ಸುಳ್ಳು. ಪ್ಲಾಸ್ಟಿಕ್ ರೈಸ್ ತಯಾರಿಸಲು ಸಾಮಾನ್ಯ ಅಕ್ಕಿಗಿಂತ ಹೆಚ್ಜ್ಚು ವೆಚ್ಚವಾಗುತ್ತದೆ. ಒಂದು ಕೆ ಜಿ ಅಕ್ಕಿಗೆ 40-50 ರೂ ಇದೆ ಎಂದಾದರೆ ಒಂದು ಕೆ ಜಿ ಪ್ಲಾಸ್ಟಿಕ್ ಅಕ್ಕಿ ಮಾಡಲು 200ರೂ ಗೂ ಅಧಿಕ ಖರ್ಚಾಗುತ್ತದೆ. ಹಾಗಾಗಿ ಪ್ಲಾಸ್ಟಿಕ್ ರೈಸ್ ಉತ್ಪಾದನೆಯೇ ಸಾಧ್ಯವಿಲ್ಲ ಎಂದು ತಿಳಿಸಿದೆ. ಇನ್ಮುಂದೆ ಜನರು ಪ್ಲಾಸ್ಟಿಕ್ ಅಕ್ಕಿ ಆತಂಕದಿಂದ ಹೊರಬಂದು ನಿಟ್ಟುಸಿರು ಬಿಡಬಹುದು.
 

ವೆಬ್ದುನಿಯಾವನ್ನು ಓದಿ