ನವದೆಹಲಿ: ಏಷ್ಯಾದ ನಂ.1 ಶ್ರೀಮಂತ ಎಂಬ ಪಟ್ಟವನ್ನು ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಕಳೆದುಕೊಂಡಿದ್ದಾರೆ.
ಇದೀಗ ಶ್ರೀಮಂತ ವ್ಯಕ್ತಿಯ ಪಟ್ಟಿಯಲ್ಲಿ ಗುಜರಾತ್ ಮೂಲದ ಉದ್ಯಮಿ ಗೌತಮ್ ಅದಾನಿ ನಂ.1 ಸ್ಥಾನಕ್ಕೇರಿದ್ದಾರೆ. ಅವರ ಆಸ್ತಿ 8.12 ಲಕ್ಷ ಕೋಟಿ ಮೌಲ್ಯ ತಲುಪಿದೆ. ವಿಶ್ವದ ಶ್ರೀಮಂತರ ಸಾಲಿನಲ್ಲಿ ಗೌತಮ್ ಅದಾನಿ 12 ನೇ ಸ್ಥಾನ ಪಡೆದಿದ್ದಾರೆ.
ಇದಕ್ಕೆ ಮೊದಲು ಏಷ್ಯಾದ ಶ್ರೀಮಂತ ವ್ಯಕ್ತಿ ಖ್ಯಾತಿ ಮುಕೇಶ್ ಅಂಬಾನಿಯವರದ್ದಾಗಿತ್ತು. ಆದರೆ ಅವರೀಗ ಎರಡನೇ ಸ್ಥಾನಕ್ಕೆ ಜಾರಿದ್ದಾರೆ. ಜಾಗತಿಕವಾಗಿಯೂ 13 ನೇ ಸ್ಥಾನಕ್ಕಿಳಿದಿದ್ದಾರೆ. ಅಂಬಾನಿ ಆಸ್ತಿ ಮೌಲ್ಯ 8.06 ಲಕ್ಷ ಕೋಟಿ ರೂ.ಗಳಾಗಿದೆ.
ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಟೆಸ್ಲಾ ಮಾಲಿಕ ಎಲಾನ್ ಮಸ್ಕ್ ನಂ.1 ಸ್ಥಾನದಲ್ಲಿದ್ದಾರೆ. ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯ ಉದ್ಯಮಿ ಮಿಸ್ತ್ರಿ 38 ನೇ ಸ್ಥಾನದಲ್ಲಿದ್ದು, ಎಚ್ ಸಿಎಲ್ ಅಧ‍್ಯಕ್ಷ ನಾಡರ್ 45 ನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ಟಾಪ್ 50 ರೊಳಗೆ ಭಾರತದ ನಾಲ್ವರು ಉದ್ಯಮಿಗಳಿದ್ದಾರೆ.