ಗೌತಮ್ ಅದಾನಿಗೆ 12 ಲಕ್ಷ ಕೋಟಿ ನಷ್ಟ!

ಶನಿವಾರ, 25 ಫೆಬ್ರವರಿ 2023 (13:44 IST)
ನವದೆಹಲಿ : ಹಿಂಡೆನ್ಬರ್ಗ್ ವರದಿಯಿಂದ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ಅದಾನಿ ಕಂಪನಿಗಳ ಷೇರುಗಳಲ್ಲಿನ ಕುಸಿತ ಮುಂದುವರಿದಿದೆ.

ಕಳೆದೊಂದು ತಿಂಗಳಲ್ಲಿ ಅದಾನಿ ಸಂಸ್ಥೆಯ 10 ಕಂಪನಿಗಳ ಹೂಡಿಕೆಯು ನೆಲಕಚ್ಚಿದ್ದು ಗೌತಮ್ ಅದಾನಿಗೆ 12 ಲಕ್ಷ ಕೋಟಿ ನಷ್ಟವಾಗಿದೆ.

ಅದಾನಿ ಗ್ರೂಪ್ನ ಮಾರುಕಟ್ಟೆ ಬಂಡವಾಳವು ಜನವರಿ 24 ರ ಮೊದಲು ಸರಿಸುಮಾರು 19 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು. ಆದರೆ ಅಮೆರಿಕ ಮೂಲದ ಹಿಂಡೆನ್ಬರ್ಗ್ ಸ್ಫೋಟಕ ವರದಿ ಬಿಡುಗಡೆ ಮಾಡಿದ ನಂತರ ಅದರ ಮೌಲ್ಯ ಸರಿ ಸುಮಾರು 7.2 ಲಕ್ಷ ಕೋಟಿಗೆ ಕುಸಿದಿದೆ.

ಅದಾನಿ ಕಂಪನಿಯ ಏಳು ಪ್ರಮುಖ ಪಟ್ಟಿಮಾಡಿದ ಕಂಪನಿಗಳು 85 ಪ್ರತಿಶತದಷ್ಟು ಕುಸಿತ ಕಂಡಿವೆ. ಅದಾನಿ ಟೋಟಲ್ ಗ್ಯಾಸ್, ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ಟ್ರಾನ್ಸ್ ಮಿಷನ್ ನಲ್ಲಿ ಭಾರೀ ನಷ್ಟ ಸಂಭವಿಸಿದ್ದು, ಕೇವಲ ಒಂದು ತಿಂಗಳಲ್ಲಿ ಸುಮಾರು 80 ಪ್ರತಿಶತದಷ್ಟು ಷೇರಿನ ಮೌಲ್ಯ ಕುಸಿದಿದೆ. 52 ವಾರಗಳ ಕನಿಷ್ಠ ಮೌಲ್ಯ ತಲುಪಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ