ಸಮಾಜವಾದಿ ಪಕ್ಷದೊಳಗಿನ ಆಂತರಿಕ ಭಿನ್ನಮತ ಇಂದು ಕೂಡ ಮುಂದುವರೆದಿದ್ದು, ಪಕ್ಷದಿಂದ ವಜಾಗೊಂಡಿರುವ ಶಾಸಕ ರಾಮ್ ಗೋಪಾಲ್ ಯಾದವ್ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರಿಗೆ ತಮ್ಮ ಮಗ, ಯುಪಿ ಸಿಎಂ ಅಖಿಲೇಶ್ ಯಾದವ್ ಅವರ ಜನಪ್ರಿಯತೆ ಕಂಡು ಅಸೂಯೆಯಾಗಿದೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ.
ತಾನು ಹೆತ್ತ ಪುತ್ರ ತನಗಿಂತ ಹೆಚ್ಚು ಏಳಿಗೆ ಕಾಣಬೇತು ಎಂದು ಎಲ್ಲ ತಂದೆ ಬಯಸುತ್ತಾರೆ. ಆದರೆ ಇಲ್ಲಾಗುತ್ತಿರುವುದು ತದ್ವಿರುದ್ಧ. ಹೀಗಾಗಬಾರದಿತ್ತು. ನಿಜಕ್ಕೂ ಇದು ಬೇಸರದ ಸಂಗತಿಯೇ ಸರಿ ಎಂದು ಸಂಬಂಧದಲ್ಲಿ ಮುಲಾಯಂ ದಾಯಾದಿ ಸಹೋದರ, ಅಖಿಲೇಶ್ ಚಿಕ್ಕಪ್ಪನಾಗಿರುವ ವರ್ಮಾ ಖೇದ ವ್ಯಕ್ತ ಪಡಿಸಿದ್ದಾರೆ.