`ತಂದೆಗೇ ದ್ರೋಹ ಮಾಡಿದವನು ಇತರರೊಡನೆ ಸ್ನೇಹದಿಂದರಲು ಸಾಧ್ಯವೇ ಇಲ್ಲ’

ಶನಿವಾರ, 1 ಏಪ್ರಿಲ್ 2017 (15:15 IST)
ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಸಮಾಜವಾದಿ ಪಕ್ಷದೊಳಗಿನ ಆಂತರಿಕ ಬೇಗುದಿ ತಣ್ಣಗಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಪಕ್ಷದ ಚಿಹ್ನೆ ಪಡೆದು ತಮ್ಮ ವಿರುದ್ಧವೇ ತಿರುಗಿಬಿದ್ದ ಪುತ್ರ ಅಖಿಲೇಶ್ ಬಗ್ಗೆ ತಂದೆ ಮುಲಾಯಂ ಸಿಂಗ್ ಯಾದವ್ ಕಿಡಿ ಕಾರಿದ್ದಾರೆ.
 

ಅಪ್ಪನಿಗೇ ದ್ರೋಹ ಮಾಡಿದವನು ಬೇರೆಯವರ ಜೊತೆ ಸ್ನೇಹದಿಂದಿರಲು ಸಾಧ್ಯವೇ ಇಲ್ಲ ಎಂದು ಮುಲಾಯಂ ಕಿಡಿ ಕಾರಿದ್ದಾರೆ. ಅಖಿಲೇಶ್`ನನ್ನ ಉತ್ತರಪ್ರದೇಶದ ಮುಖ್ಯಮಂತ್ರಿ ಮಾಡಿದೆ. ಯಾವುದೇ ಒಬ್ಬ ತಂದೆ ತನ್ನ ಅಧಿಕಾರಾವಧಿಯಲ್ಲಿ ಮಗನನ್ನ ಸಿಎಂ ಮಾಡಿದ ಉದಾಹರಣೆಗಳಿಲ್ಲ. ಆದರೆ, ಅಖಿಲೇಶ್ ಮಾಡಿದ್ದೇನು..? ಸ್ವಂತ ಚಿಕ್ಕಪ್ಪನನ್ನೇ ಸಂಪುಟದಿಂದ ಉಚ್ಚಾಟಿಸಿದ. ಈ ಮಟ್ಟಿನ ಅಪಮಾನ ನನ್ನ ಜೀವನದಲ್ಲೇ ಅನುಭವಿಸಿಲ್ಲ ಎಂದು ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ.

ರಾಜಕೀಯ ಇತಿಹಾಸದಲ್ಲಿ ಎಂದೂ ಕಂಡು ಕೇಳರಿಯದ ರೀತಿಯಲ್ಲಿ ಅಧಿಕಾರದಲ್ಲಿದ್ದಾಗ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ಜಿದ್ದಾಜಿದ್ದಿಗೆ ಬಿದ್ದಿದ್ದರು.

ವೆಬ್ದುನಿಯಾವನ್ನು ಓದಿ