ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಮನೆಗೆ ಮುಲಾಯಂ ಕಿರಿಯ ಪುತ್ರ ಭೇಟಿ

ಶುಕ್ರವಾರ, 24 ಮಾರ್ಚ್ 2017 (10:51 IST)
ಮಹತ್ವದ ಬೆಳವಣಿಗೆಯೊಂದರಲ್ಲಿ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಕಿರಿಯ ಪುತ್ರ ಪ್ರತೀಕ್ ಯಾದವ್, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಪತ್ನಿ ಅಪರ್ಣಾ ಯಾದವ್ ಜೊತೆ ಪ್ರತೀಕ್ ಯಾದವ್ ಭೇಟಿ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಸುಮಾರು ಅರ್ಧ ಗಂಟೆ ಕಾಲ ಚರ್ಚೆ ನಡೆಸಿದ್ದಾರೆಂದು ತಿಳಿದು ಬಂದಿದೆ.

ವಿಧಾನಸಭಾ ಚುನಾವಣೆಯಲ್ಲಿ ಎಸ್`ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಪರ್ಣಾ ಯಾದವ್, ಬಿಜೆಪಿಯ ರೀಟಾ ಬಹುಗುಣ ಅವರಿಂದ ಪರಾಭವಗೊಂಡಿದ್ದರು.

ಉತ್ತರ ಪ್ರದೇಶದ 403 ಕ್ಷೇತ್ರಗಳ ಪೈಕಿ ಬಿಜೆಪಿ 325 ಸ್ಥಾನಗಳನ್ನ ಗೆದ್ದಿತ್ತು. ಸಮಾಜವಾದಿ ಪಕ್ಷ 25 ವರ್ಷಗಲಲ್ಲೇ ಅತ್ಯಂತ ಕನಿಷ್ಠ 25 ಸ್ಥಾನಕ್ಕೆ ಕುಸಿದಿತ್ತು.

ಮುಲಾಯಂ ಕಿರಿಯ ಸೊಸೆ ಅಪರ್ಣಾ ಯಾದವ್ ಮೋದಿ ಅಭಿಮಾನಿಯಾಗಿದ್ದು, ಬಹಿರಂಗವಾಗಿ ಮೋದಿಯನ್ನ ಹೊಗಳುವ ಮೂಲಕ ಟೀಕೆಗೆ ಗುರಿಯಾಗಿದ್ದರು. ಅಷ್ಟೇ ಅಲ್ಲ, ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ವಿವಾದಕ್ಕೆ ಗುರಿಯಾಗಿದ್ದರು. ಆದರೆ, ಈ ಬಗ್ಗೆ ಪ್ರಶ್ನಿಸಿದಾಗ. ಅದರಲ್ಲಿ ತಪ್ಪೇನಿದೆ ಅವರು ಎಲ್ಲರ ಪ್ರಧಾನಿ ಎಂದು ಉತ್ತರಿಸಿದ್ದರು.

ವೆಬ್ದುನಿಯಾವನ್ನು ಓದಿ