1993ರ ಮುಂಬೈ ಸರಣಿ ಸ್ಫೋಟ ಪ್ರಕರಣ: ಅಬುಸಲೇಂ ಸೇರಿ ಇತರರು ದೋಷಿಗಳು

ಶುಕ್ರವಾರ, 16 ಜೂನ್ 2017 (13:25 IST)
1993ರ ಮುಂಬೈ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ ಅಬು ಸಲೆಂ ಸೇರಿದಂತೆ ಇತರೆ ಆರೋಪಿಗಳು ದೋಷಿಗಳೆಂದು ಮುಂಬೈನ ಟಾಡಾ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಅಬು ಸಲೇಂ, ಮುಸ್ತಫಾ ದೊಸ್ಸಾ, ಫೀರೋಜ್ ಅಬ್ದುಲ್ ರಶೀದ್ ಖಾನ್, ತಹೀರ್ ಮರ್ಚೆಂಟ್ ದೋಷಿಗಳೆಂದು ಕೋರ್ಟ್ ನಿರ್ಧರಿಸಿದೆ. 2007ರಲ್ಲಿ ಪ್ರಕರಣದ ಮೊದಲ ತೀರ್ಪು ಹೊರಬಿದ್ದಿತ್ತು. 100 ಮಂದಿಯನ್ನ ದೋಷಿಗಳೆಂದು ಘೋಷಿಸಿದ್ದ ಕೋರ್ಟ್, 23 ಮಂದಿಯನ್ನ ಖುಲಾಸೆಗೊಳಿಸಿತ್ತು.

ಅಬು ಸಲೆಂ ಗುಜರಾತ್`ನಿಂದ ಮುಂಬೈಗೆ ಶಸ್ತ್ರಾಸ್ತ್ರ ಸಾಗಿಸಿದ್ದ ಅಪರಾಧದಡಿ ದೋಷಿಯೆಂದು ಸಾಬೀತಾಗಿದೆ. ಎಕೆ 56, ಹ್ಯಾಂಡ್ ಗ್ರೇನೇಟ್ ಸೇರಿದಂತೆ ಸ್ಫೋಟಕಗಳನ್ನ ಸಂಜಯ್ ದತ್ ನಿವಾಸಕ್ಕೆ ತಲುಪಿಸಿದ್ದ ಆರೋಪ ಸಾಬೀತಾಗಿದೆ. 2002ರಲ್ಲಿ ಅಬು ಸಲೇಂನನ್ನ ಪೋರ್ಚುಗಲ್`ನಲ್ಲಿ ಬಂಧಿಸಲಾಗಿತ್ತು. ಆರೋಪಿಗಳು ಸುಪ್ರೀಂಕೋರ್ಟ್ ಮೂಲಕ ತನಿಖೆ ತಡೆ ತಂದಿದ್ದರಿಂದ ವಿಚಾರಣೆ ವಿಳಂಬವಾಗಿತ್ತು. ವಿಚಶಾರಣೆ ವೇಳೆ 750 ಪ್ರಾಸಿಕ್ಯೂಶನ್ ಸಾಕ್ಷಿಗಳು ಮತ್ತು 50 ಇತರೆ ಸಾಕ್ಷಿಗಳನ್ನ ಕೋರ್ಟ್ ವಿಚಾರಣೆ ನಡೆಸಿದೆ.

1993ರ ಮಾರ್ಚ್ 12ರಂದು ಮುಂಬೈನ ವಿವಿಧೆಡೆ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ 250 ಮಂದಿ ಮೃತಪಟ್ಟು, 750ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

 

ವೆಬ್ದುನಿಯಾವನ್ನು ಓದಿ