ಸಿನೆಮಾ ನಟನ ಪತ್ನಿಯ ಎದುರೇ ನಡೆಯಿತು ಕಾಮುಕನ ಹೀನ ಕೃತ್ಯ

ಮಂಗಳವಾರ, 20 ಫೆಬ್ರವರಿ 2018 (17:13 IST)
ಉದ್ರೇಕಗೊಂಡು ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಳ್ಳುವ ಕಾಮುಕರ ಸಂಖ್ಯೆ ಮತ್ತು ಪ್ರಕರಣಗಳು ಇತ್ತೀಚಿಗೆ ಹೆಚ್ಚುತ್ತಿವೆ. ಈ ರೀತಿಯ ಘಟನೆಯೊಂದು ನಟ ಸುಮೀತ್ ರಾಘವನ್ ಅವರ ಪತ್ನಿ ಚಿನ್ಮಯಿ ಸುರ್ವೆ ಅವರಿಗೆ ಎದುರಾಗಿದೆ.

ಮುಂಬೈನ ಪ್ರದೇಶವಾದ ವಿಲೇ ಪಾರ್ಲೆಯಲ್ಲಿ ಚಿನ್ಮಯಿ ಅವರು ಕೆಲಸದ ನಿಮಿತ್ತ ಹೋಗಿದ್ದಾಗ, ಬಿಳಿ ಬಣ್ಣದ ಬಿಎಮ್‌ಡಬ್ಲೂದಲ್ಲಿದ್ದ ವ್ಯಕ್ತಿ ಅವರ ಎದುರೇ ಹಸ್ತಮೈಥುನ ಮಾಡಿಕೊಂಡಿದ್ದಾನೆ ಮತ್ತು ಅವರು ಪ್ರತಿಕ್ರಿಯಿಸುವ ಮೊದಲೇ ಸ್ಥಳದಿಂದ ಪಲಾಯನ ಮಾಡಿದ್ದಾನೆ. ಆದಾಗ್ಯೂ, ಸುಮೀತ್ ರಾಘವನ್ ಅವರ ಪತ್ನಿ ಚಿನ್ಮಯಿ ಕಾರ್‌ನ ಕೊನೆಯ ನಾಲ್ಕು ಸಂಖ್ಯೆಗಳನ್ನು ಬರೆದುಕೊಂಡಿದ್ದಾರೆ.
 
ಈ ಮಾನಹೀನ ಘಟನೆಯಿಂದ ಕೋಪಗೊಂಡ ಸುಮೀತ್ ಈ ಘಟನೆಯನ್ನು ವರದಿ ಮಾಡಲು ಟ್ವಿಟ್ಟರ್ ಬಳಸಿಕೊಂಡಿದ್ದಾರೆ. ಅವರು ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆ, "1985 ಸಂಖ್ಯೆಯನ್ನು ಕೊನೆಯ 4 ಅಂಕೆಗಳಾಗಿ ಹೊಂದಿರುವ ಬಿಳಿ ಬಿಎಮ್‌ಡಬ್ಲೂ ಅನ್ನು ಕಂಡುಹಿಡಿಯಬೇಕು. ಪೂರ್ವ ವಿಲೇ ಪಾರ್ಲೆಯಲ್ಲರುವ (#VileParleEast) ಪಾರ್ಲೆ ತಿಲಕ್ ಶಾಲೆ (#ParleTilakSchool) ಸಮೀಪ ಕಾರನ್ನು ನಿಲ್ಲಿಸಿದ್ದ, ಬೂದು ಬಣ್ಣದ ಸಫಾರಿಯನ್ನು ಧರಿಸಿದ್ದ ಚಾಲಕ ನನ್ನ ಹೆಂಡತಿಯ ಎದುರಲ್ಲೇ ಹಸ್ತಮೈಥುನ ಮಾಡಿಕೊಳ್ಳಲು ಪ್ರಾರಂಭಿಸಿದ್ದಾನೆ. ಅವಳು ಅವನನ್ನು ಹೊಡೆಯುವುದಕ್ಕೆ ಮೊದಲೇ ಅವನು ತಪ್ಪಿಸಿಕೊಂಡ. ಅವಳಿಗೆ ಕಾರಿನ ಕೊನೆಯ 4 ಅಂಕೆಗಳನ್ನು ಬರೆದುಕೊಳ್ಳಲು ಮಾತ್ರ ಸಾಧ್ಯವಾಗಿದೆ ಮುಂಬೈ ಪೊಲೀಸ್ (@MumbaiPolice)."
 
ಇದಕ್ಕೆ ಮುಂಬೈ ಪೊಲೀಸ್ ತ್ವರಿತವಾಗಿ ಪ್ರತ್ಯುತ್ತರ ನೀಡಿದ್ದಾರೆ. ಅವರು ಹೆಚ್ಚು ಸಮಯ ತೆಗೆದುಕೊಳ್ಳದೆಯೇ ಅಪರಾಧಿಯನ್ನು ಬಂಧಿಸಿದ್ದಾರೆ. ನಟ ಈ ಸುದ್ದಿಯನ್ನು ಟ್ವೀಟ್ ಮೂಲಕ ದೃಢಪಡಿಸಿದರು.
 
ಮುಂಬೈ ಪೊಲೀಸ್‌ಗೆ ಕೃತಜ್ಞತೆಯನ್ನು ತಿಳಿಸುತ್ತಾ, "ಸಂಜೆ 4.15 ಕ್ಕೆ ಎಫ್ಐಆರ್ ದಾಖಲಿಸಿದ ನಂತರ, ಕೇವಲ 2 ಗಂಟೆಗಳಲ್ಲಿಯೇ ಕಾಮುಕನನ್ನು ಪೋಲಿಸರು ಬಂಧಿಸಿದ್ದಾರೆ. ಮುಂಬೈ ಪೊಲೀಸ್‌ಗೆ (@MumbaiPolice) ಕೃತಜ್ಞತೆ ಮತ್ತು ಗೌರವ ಪೂರ್ವಕ ಧನ್ಯವಾದಗಳು. ವಿಲೇ ಪಾರ್ಲೆ ಆರಕ್ಷಕ ಠಾಣೆ (#VileParlePoliceStation) ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ವಂದನೆ (#Salute).
 
ಇಂತಹ ವಿಷಯಗಳು ಸಂಭವಿಸಿದಲ್ಲಿ, ದಯವಿಟ್ಟು ಪೊಲೀಸರ ಹತ್ತಿರ ಹೋಗಿ. ಕಷ್ಟ ಪಡಬೇಡಿ. ಇಂತಹ ಘಟನೆಗಳ ವಿರುದ್ಧ ಹೋರಾಡಿ.
 
ಈ ಘಟನೆಯು ಅವರನ್ನು ಕೆರಳಿಸಿದೆ ಮತ್ತು ಆಘಾತಕ್ಕೆ ಒಳಪಡಿಸಿದೆ, ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡುತ್ತ, ಸುಮೀತ್ ಈ ರೀತಿ ಹೇಳಿದ್ದಾರೆ, "ಹಗಲು ಹೊತ್ತಿನಲ್ಲಿ ಇಂತಹ ಅಶ್ಲೀಲತೆ ನಡೆದಿದೆ ಎಂಬುವುದು ಆಘಾತಕಾರಿ ಸಂಗತಿಯಾಗಿದೆ. ಘಟನೆ ನಡೆದ ತಕ್ಷಣವೇ ನನ್ನ ಹೆಂಡತಿ ಕರೆ ಮಾಡಿದಾಗ ನಾನು ಮನೆಯಲ್ಲಿದ್ದೆ. ಜವಾಬ್ದಾರಿಯುತ ನಾಗರಿಕರಾಗಿರುವುದರಿಂದ ನಾವು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ ಮತ್ತು ಸ್ಥಳೀಯ ಪೊಲೀಸ್ ಠಾಣೆ ಮತ್ತು ಸಂಚಾರ ಇಲಾಖೆಯಲ್ಲಿಯೂ ಕೂಡಾ ಅಧಿಕೃತ ದೂರನ್ನು ದಾಖಲಿಸಿದ್ದೇವೆ. ಅಪರಾಧಿಯನ್ನು ಶೀಘ್ರದಲ್ಲೇ ಸೆರೆಹಿಡಿಯಲಾಗುತ್ತದೆ ಎನ್ನುವ ಭರವಸೆಯನ್ನು ನಾವು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ