‘ಮೋದಿಯಂತಹ ಅಣ್ಣನಿರುವಾಗ ಭಯಪಡಬೇಕಿಲ್ಲ’

ಶನಿವಾರ, 30 ಡಿಸೆಂಬರ್ 2017 (07:55 IST)
ನವದೆಹಲಿ: ತ್ರಿವಳಿ ತಲಾಖ್ ರದ್ಧತಿ ನಂತರ ಮುಸ್ಲಿಂ ಮಹಿಳೆಯರ ಪರವಾಗಿ ಹೊಸ ಕಾಯಿದೆಗೆ
ಸಂಸತ್ತಿನಲ್ಲಿ ಮಸೂದೆ ಮಂಡಿಸಿದ್ದಕ್ಕೆ ಖುಷಿಯಾಗಿರುವ ಮುಸ್ಲಿಂ ಮಹಿಳಾ ಸಮುದಾಯದ  ಪರವಾಗಿ ಸಂಸದೆ ಮೀನಾಕ್ಷಿ ಲೇಖಿ ಮೋದಿಯಂತಹ ಅಣ್ಣನಿರುವಾಗ ನಮಗೆ ಇನ್ಯಾಕೆ ಭಯ ಎಂದಿದ್ದಾರೆ.
 

ಮುಸ್ಲಿಂ ಮಹಿಳೆಯರ ಕೈಬಲಪಡಿಸುವಂತಹ ಮಸೂದೆಯನ್ನು ಮಂಡಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ ಬೆನ್ನಲ್ಲೇ ಮುಸ್ಲಿಂ ಸಮುದಾಯ ಖುಷಿ ವ್ಯಕ್ತಪಡಿಸಿದ್ದು, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಗುರವಾರ ತ್ರಿವಳಿ ತಲಾಖ್ ಗೆ ಸಂಬಂಧಿಸಿದ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಸಂಸದೆ ಮೀನಾಕ್ಷಿ ‘ತಲಾಖ್ ಗೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಈ ದೇಶದಲ್ಲಿ ಮಹಿಳೆಯರೇ ಅಲ್ಪ ಸಂಖ್ಯಾತರು. ಮಹಿಳೆಯರನ್ನು ದುರ್ಬಲಗೊಳಿಸುವ ಎಲ್ಲಾ ಪದ್ಧತಿಗಳನ್ನು ನಿರ್ನಾಮ ಮಾಡಲು ಇದು ಸರಿಯಾದ ಸಮಯ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ