ನನ್ನ ಸಾವಿಗೆ ಪತ್ನಿ, ಅತ್ತೆಯೇ ಕಾರಣ: ನ್ಯಾಯಕೊಡಿಸಲು ಸಾಧ್ಯವಾಗದಿದ್ದರೆ ಚಿತಾಭಸ್ಮ ಚರಂಡಿಗೆ ಎಸೆಯಿರಿ, ವಿಡಿಯೋ ಮಾಡಿಟ್ಟು ಟೆಕ್ಕಿ ಸಾವು

Sampriya

ಭಾನುವಾರ, 20 ಏಪ್ರಿಲ್ 2025 (15:25 IST)
ಉತ್ತರ ಪ್ರದೇಶ: ದೇಶವನ್ನೇ ಬೆಚ್ಚಿಬೀಳಿಸಿದ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನಾ ಹಾಗೆಯೇ ಉತ್ತರಪ್ರದೇಶದ ಟೆಕ್ಕಿಯೊಬ್ಬರು ತಮ್ಮ ಪತ್ನಿ ಮತ್ತು ಅತ್ತೆ ಕಿರುಕುಳದಿಂದ ಬೇಸತ್ತು ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.

ಉತ್ತರ ಪ್ರದೇಶದ ಇಟಾವಾದಲ್ಲಿ ಇಂಜಿನಿಯರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನಾ ಪತ್ನಿ ಮತ್ತು ಆಕೆಯ ತಾಯಿ ಮೇಲೆ ಗಂಭೀರ ಆರೋಪ ಮಾಡಿ, ಇವರಾ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಹೇಳಿದ್ದಾರೆ.

ಆತ್ಮಹತ್ಯೆಗೆ ಶರಣಾದ ಇಂಜಿನಿಯರ್‌ ಅನ್ನು ಔರೈಯಾ ಜಿಲ್ಲೆಯ ನಿವಾಸಿ ಮೋಹಿತ್ ಯಾದವ್ ಎಂದು ಗುರುತಿಸಲಾಗಿದೆ. ಅದಲ್ಲದೆ ನನ್ನ ಸಾವಿಗೆ ನ್ಯಾಯ ದೊರಕಿಸಿ ಕೊಡಲು ಸಾಧ್ಯವಾಗದಿದ್ದರೆ, ಚಿತಾಭಸ್ಮವನ್ನು ಚರಂಡಿಗೆ ಎಸೆಯಿರಿ ಎಂದು ಹೇಳಿದ್ದಾರೆ.

ಅತ್ತೆಯ ವಿರುದ್ಧ ಮೋಹಿತ್ ಯಾದವ್ ಆರೋಪಗಳು

ತನ್ನ ಅತ್ತೆ ತನ್ನ ಎಲ್ಲಾ ಆಭರಣಗಳನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದಾಳೆ ಎಂದು ಆತ ಹೇಳಿಕೊಂಡಿದ್ದಾನೆ. ನಾವು ಮದುವೆಯ ಸಂದರ್ಭದಲ್ಲಿ ಯಾವುದೇ ವರದಕ್ಷಿಣೆಯನ್ನು ಕೇಳಿಲ್ಲವಾದರೂ, ನನ್ನ ಹಾಗೂ ನನ್ನ ಮನೆಯವರ ವಿರುದ್ಧ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.

"ನಾನು ನನ್ನ ಮನೆ ಮತ್ತು ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸದಿದ್ದರೆ, ನನ್ನ ಕುಟುಂಬದ ಮೇಲೆ ವರದಕ್ಷಿಣೆ ಪ್ರಕರಣದಲ್ಲಿ ಸುಳ್ಳು ಆರೋಪ ಮಾಡುವುದಾಗಿ ನನ್ನ ಹೆಂಡತಿ ಹೇಳಿದ್ದಾಳೆ. ಆಕೆಯ ತಂದೆ ಮನೋಜ್ ಕುಮಾರ್ ನಕಲಿ ದೂರು ದಾಖಲಿಸಿದ್ದಾರೆ ಮತ್ತು ಆಕೆಯ ಸಹೋದರ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ," ಎಂದು ವೀಡಿಯೊದಲ್ಲಿ ಆರೋಪಿಸಿದ್ದಾನೆ, ತನ್ನ ಹೆಂಡತಿ ತನ್ನೊಂದಿಗೆ ಪ್ರತಿನಿತ್ಯ ಜಗಳವಾಡಲು ಪ್ರಾರಂಭಿಸಿದಳು ಮತ್ತು ಆಕೆಗೆ ಕುಟುಂಬ ಸದಸ್ಯರು ಬೆಂಬಲ ನೀಡಿದರು.

ಹೃದಯವಿದ್ರಾವಕ ವೀಡಿಯೊದ ಕೊನೆಯಲ್ಲಿ, ಟೆಕ್ಕಿ ತನ್ನ ಹೆತ್ತವರಲ್ಲಿ ಕ್ಷಮೆಕೋರಿ, ನನ್ನ ಸಾವಿಗೆ ನ್ಯಾಯ ದೊರಕಿಸಿ ಕೊಡಲು ಸಾಧ್ಯವಾಗದಿದ್ದರೆ ಚಿತಾಭಸ್ಮವನ್ನು ಚರಂಡಿಗೆ ಎಸೆಯುವಂತೆ ಒತ್ತಾಯಿಸಿದನು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ