ನಮೋ ಆ್ಯಪ್: ನೀವು ಕೂಡ ಪ್ರಧಾನಿ ಮೋದಿಗೆ ಶುಭಾಶಯ ಕಳುಹಿಸಿ

ಶನಿವಾರ, 17 ಸೆಪ್ಟಂಬರ್ 2016 (16:06 IST)
ಇಂದು 66 ನೇ ಜನ್ಮದಿನಕ್ಕೆ ಕಾಲಿಡುತ್ತಿರುವ ಪ್ರಧಾನಿ ಮೋದಿಗೆ ಹಾರೈಸಬೇಕೆಂಬ ಬಯಕೆ ನಿಮಗಿದೆಯೇ? ಅದೀಗ ಕಷ್ಟ ಸಾಧ್ಯವಲ್ಲ. ಪ್ರಧಾನಿ ಮೋದಿ ಅವರಿಗೆ ಶುಭಾಶಯ ಕೋರಲು ಎನ್ಎಂ(ನಮೋ) ಆ್ಯಪ್‌ನ್ನು ರಚಿಸಲಾಗಿದೆ. ಈ ಮೂಲಕ ಜನರು ಅವರಿಗೆ ನೇರವಾಗಿ ಅವರಿಗೆ ಸಂದೇಶ ಕಳುಹಿಸಬಹುದು. 

ಈ ಆ್ಯಪ್‌‌ ಓಪನ್ ಮಾಡಿ ಅದರಲ್ಲಿರುವ ವಿಶೇಷ ಆಯ್ಕೆ ಮೂಲಕ ಕಸ್ಟಮೈಸ್ಡ್ ಶುಭಾಶಯ ಪತ್ರಗಳನ್ನು ಸಿದ್ಧಪಡಿಸಿ ಕಳುಹಿಸಬಹುದು.ಪ್ರಧಾನಿ ಫೋಟೋ ಜತೆ ನಿಮ್ಮ ಫೋಟವನ್ನು ಲಗತ್ತಿಸಿ ಕೂಡ ಗ್ರೀಟಿಂಗ್ಸ್‌ಗಳನ್ನು ಸಿದ್ಧಪಡಿಸಬಹುದು.  
 
ತಾಯಿ ಆಶೀರ್ವಾದ : ಇಂದು ಮುಂಜಾನೆಯೇ ಗಾಂಧಿನಗರದ ತಮ್ಮ ನಿವಾಸಕ್ಕೆ ತೆರಳಿ ತಾಯಿಯನ್ನು ಕಂಡು ಅವರಿಂದ ಆರ್ಶೀವಾದ ಪಡೆದು ತಮ್ಮ ಜನ್ಮದಿನವನ್ನು ಆರಂಭಿಸಿದ ಮೋದಿಯವರಿಗೆ, ತಾಯಿ ಹೀರಾ ಬೆನ್ ಸಿಹಿ ತಿನ್ನಿಸಿದರು.
 
ಈ ದಿನ ಎಂದಿಗೂ ಮರೆಯಲಾಗದ ದಿನವಾಗಿಸುವ ಯೋಜನೆ ರೂಪಿಸಲಾಗಿದೆ.  ಗುಜರಾತ್ ಸರ್ಕಾರ ಮತ್ತು ವಿವಿಧ ಸಂಸ್ಥೆಗಳು ಪ್ರಧಾನಿ ಮೋದಿ ಜನ್ಮದಿನಾಚರಣೆಯನ್ನು ಮೂರು ಗಿನ್ನಿಸ್ ದಾಖಲೆ ಮತ್ತು ಒಂದು ರಾಷ್ಟ್ರೀಯ ದಾಖಲೆಯನ್ನಾಗಿಸುವ ಗುರಿಯನ್ನು ಹೊಂದಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

ವೆಬ್ದುನಿಯಾವನ್ನು ಓದಿ