ದೇಶದ ಎಲ್ಲಾ ಬ್ಯಾಂಕ್‌ಗಳಲ್ಲಿ ಮತ್ತು ಬ್ಯಾಂಕ್ ಶಾಖೆಗಳಲ್ಲಿ ಆರ್‌ಬಿಐ, ಖಾಸಗಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಎನ್ನುವ ತಾರತಮ್ಯ ಮಾಡದೆ ಅಗತ್ಯವಾದ ಹಣ ಸರಬರಾಜು ಮತ್ತು ಎಲ್ಲಾ ಎಟಿಎಂಗಳಲ್ಲಿ ಹಣದ ಸೌಲಭ್ಯ ಒದಗಿಸಬೇಕು. ಇಲ್ಲವಾದಲ್ಲಿ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಬ್ಯಾಂಕ್ ಸಿಬ್ಬಂದಿಗಳು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.