ಪಂಜಾಬ್ ಕದನಕ್ಕೆ ರಂಗೇರಿಸಿದ ಸಿಧು; ಬಿಜೆಪಿಗೆ ಗುಡ್ ಬೈ

ಬುಧವಾರ, 14 ಸೆಪ್ಟಂಬರ್ 2016 (16:24 IST)
ಹೊಸ ಪಕ್ಷ 'ಆವಾಜ್ - ಇ- ಪಂಜಾಬ್' ಪಕ್ಷವನ್ನು ಸ್ಥಾಪಿಸಿರುವ ಕ್ರಿಕೆಟರ್ ಪರಿವರ್ತಿತ ರಾಜಕಾರಣಿ 'ನವಜೋತ್ ಸಿಂಗ್ ಸಿಧು' ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. 

ಸಿಧು ಮತ್ತು ಅವರ ಪತ್ನಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ಸ್ಪಷ್ಟ ಪಡಿಸಿವೆ. 
 
ಹೊಸ ರಾಜಕೀಯ ಪಕ್ಷವನ್ನು ಅಸ್ತಿತ್ವಕ್ಕೆ ತಂದಿರುವ ಸಿಧು, 'ನನ್ನ ಯುದ್ಧ ಪಂಜಾಬ್‌ನ್ನು ನಾಶ ಮಾಡಿದ ರಾಜಕೀಯ ನಾಯಕರ ವಿರುದ್ಧ', ಎಂದಿದ್ದಾರೆ.
 
ಸೆಪ್ಟೆಂಬರ್ 2 ರಂದು ನೂತನ ಪಕ್ಷವನ್ನು ಘೋಷಿಸಿದ ರಾಜ್ಯಸಭೆಯ ಮಾಜಿ ಸದಸ್ಯ ರಾಜ್ಯದ ಎಲ್ಲ 117 ವಿಧಾನಸಭಾ ಕ್ಷೇತ್ರಗಳಲ್ಲಿ  ಪಕ್ಷ ಕಣಕ್ಕಿಳಿಯಲಿದೆ ಎಂದು ಘೋಷಿಸಿದ್ದಾರೆ. 
 
ಮುಂದಿನ ವರ್ಷದ ಆರಂಭದಲ್ಲಿ ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. 
 
'ನಮ್ಮ ಘೋಷವಾಕ್ಯ, ಪಂಜಾಬ್ ಗೆಲ್ಲಲಿದೆ, ಪಂಜಾಬಿತನ ಗೆಲ್ಲಲಿದೆ. ಪಂಜಾಬ್‌ನ್ನು ನಾಶಗೊಳಿಸಿದ ವ್ಯವಸ್ಥೆಯ ವಿರುದ್ಧ ನಮ್ಮ ಹೋರಾಟ. ಸ್ವಾರ್ಥ ಆಸಕ್ತಿಗಳು ರಾಜ್ಯದ ಹಿತಾಸಕ್ತಿಯನ್ನು ಮೂಲೆಗೆ ತಳ್ಳಿವೆ. ಪಂಜಾಬ್ ಆಡಳಿತದಲ್ಲಿ ಬದಲಾವಣೆಯನ್ನು ಬಯಸುತ್ತದೆ', ಎಂದು ಭಾರತೀಯ ಜನತಾ ಪಕ್ಷದ ಮಾಜಿ ನಾಯಕ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ