ಪತ್ರಕರ್ತರೊಬ್ಬರ ಪ್ರಶ್ನೆಯಿಂದ ಬೇಸರಗೊಂಡ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ: ಅಷ್ಟಕ್ಕೂ ಆತ ಕೇಳಿದ್ದೇನು ಗೊತ್ತಾ?
ಭಾನುವಾರ, 25 ನವೆಂಬರ್ 2018 (09:48 IST)
ನವದೆಹಲಿ: ಮಾಧ್ಯಮಗೋಷ್ಠಿಯೊಂದರಲ್ಲಿ ಪ್ರಶ್ನೋತ್ತರ ವೇಳೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಯಿಂದ ಬೇಸರವಾಗಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಹೇಳಿಕೊಂಡರು. ಅಷ್ಟಕ್ಕೂ ಆ ಪತ್ರಕರ್ತ ಕೇಳಿದ್ದೇನು ಗೊತ್ತಾ?
ಮಧ್ಯಪ್ರದೇಶದಲ್ಲಿ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದಾಗ ಪತ್ರಕರ್ತರೊಬ್ಬರು ವ್ಯಂಗ್ಯ ಮಿಶ್ರಿತವಾಗಿ ‘ಯಾಕೆ ನೀವು 2016 ರಲ್ಲಿ ನಡೆಸಿದ ಸರ್ಜಿಕಲ್ ದಾಳಿ ಬಗ್ಗೆ ಈಗಲೂ ಬೊಂಬಡ ಬಜಾಯಿಸುತ್ತೀರಿ’ ಎಂದು ಕೇಳಿದ್ದ.
ಇದಕ್ಕೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಂ ‘ಹೌದು ಈ ವಿಚಾರವನ್ನು ನಾವು ವೈಭವೀಕರಿಸಬೇಕು. ಅದರಲ್ಲಿ ತಪ್ಪೇನಿದೆ? ನಮ್ಮ ಶತ್ರುಗಳ ಮೇಲೆ ದಾಳಿ ಮಾಡಿದ್ದಕ್ಕೆ ನಾಚಿಕೆ ಪಟ್ಟುಕೊಳ್ಳಬೇಕೇ? ನಮ್ಮ ಸೈನಿಕರ ಸಾಧನೆಯನ್ನು ಮುಚ್ಚಿಡಬೇಕೇ?’ ಎಂದು ಕೇಳಿದರು.
ಬಳಿಕ ‘ಅದೇನೇ ಇರಲಿ, ನೀವು ಕೇಳಿದ ರೀತಿಯಿಂದ ನನಗೆ ನಿಜಕ್ಕೂ ಬೇಸರವಾಯಿತು. ನಿಮ್ಮ ಧ್ವನಿ ಹೇಗಿತ್ತು ಎಂದು ನಾನು ಗುರುತಿಸಿದೆ. ನನಗೂ ಹಿಂದೆ ಬರುತ್ತದೆ’ ಎಂದು ಪತ್ರಕರ್ತನಿಗೆ ನೇರವಾಗಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.