43 ಯೋಧರ ಪ್ರಾಣ ತ್ಯಾಗ ವ್ಯರ್ಥವಾಗಲು ಬಿಡಲ್ಲ: ಪ್ರಧಾನಿ ಮೋದಿ ಸವಾಲು

ಶುಕ್ರವಾರ, 15 ಫೆಬ್ರವರಿ 2019 (09:52 IST)
ನವದೆಹಲಿ: ನಿನ್ನೆ ಜಮ್ಮು ಕಾಶ್ಮೀರದ ಆವಂತಿಪೋರಾದಲ್ಲಿ ಜೈಶ್ ಎ ಮೊಹಮ್ಮದ್ ಉಗ್ರರು ನಡೆಸಿದ ಪೈಶಾಚಿಕ ಕೃತ್ಯದಲ್ಲಿ 43 ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆಗೆ ತಕ್ಕ ಪ್ರತೀಕಾರ ಕೊಡುತ್ತೇವೆ ಎಂದು ಪ್ರಧಾನಿ ಮೋದಿ ಆಕ್ರೋಶದಿಂದಲೇ ಹೇಳಿದ್ದಾರೆ.


ಆತ್ಮಾಹುತಿ ಬಾಂಬರ್ ಸ್ಕಾರ್ಪಿಯೋ ಕಾರ್ ನಲ್ಲಿ 350 ಕೆಜಿ ಸ್ಪೋಟಕಗಳನ್ನು ತುಂಬಿಸಿಕೊಂಡು ಸಿಆರ್ ಪಿಎಫ್ ಯೋಧರು ಸಂಚರಿಸುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆಸಿ 43 ಯೋಧರ ಮಾರಣ ಹೋಮ ನಡೆಸಿದ್ದರು.

ಇದು ದೇಶವೇ ಬೆಚ್ಚಿ ಬೀಳುವಂತೆ ಮಾಡಿದೆ. ಘಟನೆಯಿಂದ ಸಿಟ್ಟಿಗೆದ್ದಿರುವ ಪ್ರಧಾನಿ ಮೋದಿ ಯೋಧರ ಪ್ರಾಣ ತ್ಯಾಗ  ವ್ಯರ್ಥವಾಗಲು ಬಿಡಲ್ಲ ಎಂದಿದ್ದಾರೆ. ಹಿಂದೆ ಉರಿಯಲ್ಲಿ ಉಗ್ರರು ದಾಳಿ ನಡೆಸಿದ್ದಾಗಲೂ ಪ್ರಧಾನಿ ಇದೇ ಹೇಳಿಕೆ ನೀಡಿದ್ದರು. ಬಳಿಕ ಸರ್ಜಿಕಲ್ ಸ್ಟ್ರೈಕ್ ನಡೆಸಲು ಸೇನೆಗೆ ಸೂಚಿಸಿದ್ದರು. ಇದೀಗ ಪ್ರಧಾನಿಯ ಹೇಳಿಕೆ ಗಮನಿಸಿದರೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆದರೂ ಅಚ್ಚರಿಯಿಲ್ಲ.

ಇಂದು ಘಟನಾ ಸ್ಥಳಕ್ಕೆ ಗೃಹಸಚಿವ ರಾಜನಾಥ್ ಸಿಂಗ್ ಭೇಟಿ ನೀಡಲಿದ್ದಾರೆ. ಇನ್ನು, ಘಟನೆಗೆ ಕಾರಣವಾದ ಜೈಶ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ರನನ್ನು ಪಾಕ್ ಆರಾಮವಾಗಿ ತಿರುಗಾಡಲು ಬಿಟ್ಟಿದೆ. ಉಗ್ರರನ್ನು ನಿಗ್ರಹಿಸದ ಪಾಕ್ ಗೆ ತಕ್ಕ ಪಾಠ ಕಲಿಸಿ ಎಂದು ಭಾರತ ವಿಶ್ವಸಂಸ್ಥೆಗೆ ದೂರಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ