ಸರ್ವಾಧಿಕಾರಿಗಳಿಂದ ದೇಶವನ್ನು ಉಳಿಸುವ ಅಗತ್ಯವಿದೆ: ಕೇಜ್ರಿವಾಲ್

ಗುರುವಾರ, 26 ಜನವರಿ 2017 (13:23 IST)
ಗಣರಾಜ್ಯೋತ್ಸವದ ದಿನದಂದು ದೇಶದ ಜನತೆಗೆ ಶುಭಕೋರಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸರ್ವಾಧಿಕಾರಿಗಳಿಂದ ದೇಶವನ್ನು ಉಳಿಸುವ ಅಗತ್ಯವಿದೆ ಎಂದು ಕರೆ ನೀಡಿದರು. 
 
ಹಿಟ್ಲರ್‌ನಂತರ ಸರ್ವಾಧಿಕಾರಿಗಳು ದೇಶವನ್ನು ಅಧೋಗತಿಗೆ ತೆಗೆದುಕೊಂಡು ಹೋಗುತ್ತಿದ್ದು ಇಂತಹ ವಿಚ್ಚಿದ್ರಕಾರಿ ಶಕ್ತಿಗಳ ವಿರುದ್ಧ ದೇಶದ ಜನತೆ ಒಂದಾಗಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.
 
ಗಣರಾಜ್ಯೋತ್ಸವದ ಒಂದು ದಿನ ಮುಂಚೆ ಸಿಬಿಐ ಅಧಿಕಾರಿಗಳು ದೆಹಲಿ ಸರಕಾರಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಂಡಿರುವುದಕ್ಕೆ ವಾಗ್ದಾಳಿ ನಡೆಸಿದ ಅವರು,ಪ್ರಧಾನಿ ಮೋದಿಯ ಹುನ್ನಾರದಿಂದ ಇಂತಹ ಕೃತ್ಯಗಳು ನಡೆಯುತ್ತಿವೆ ಎಂದು ಆರೋಪಿಸಿದರು.
 
ಪ್ರಧಾನಿ ಮೋದಿ ಸರಕಾರ ವಿಪಕ್ಷಗಳ ಅಡಳಿತವಿರುವ ರಾಜ್ಯಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದೆ. ಉತ್ತರಾಖಂಡ, ಸೇರಿದಂತೆ ಅನೇಕ ರಾಜ್ಯಗಳಲ್ಲಿ ಸರಕಾರವನ್ನು ಉರುಳಿಸಿ ಕೋರ್ಟ್‌ಗಳಿಂದ ಛೀಮಾರಿ ಹಾಕಿಸಿಕೊಂಡರೂ ತಮ್ಮ ನಡುವಳಿಕೆಯಲ್ಲಿ ಬದಲಾಯಿಸಿಕೊಂಡಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಿಡಿಕಾರಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ